ರಾಯಚೂರು, ಜು.೬- ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ.ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್ ಒತ್ತಾಯಿಸಿದ್ದಾರೆ. ಮನೆ ಮನೆಗೆ ಹೋಗಿ ಮಾಹಿತಿ ಸಂಗ್ರಹ ನಡೆಯುತ್ತಿಲ್ಲ. ಬದಲಾಗಿ ಕೆಲವೆಡೆ ಕುಳಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಸ್ಥಳಾಂತರ ವಾದವರು, ಮೃತ ರಾದರ ಹೆಸರು ಕಡಿತಗೊಳ್ಳುವದಿಲ್ಲ. ಪರಿಷ್ಕರಣೆ ಯ ಮುಖ್ಯ ಉದ್ದೇಶವೇ ಸಾಕಾರಗೊಳ್ಳುತ್ತಿಲ್ಲ.ಸಮಗ್ರ ತನಿಖೆ ನಡೆಸಬೇಕು ಎಂದು ಅಗ್ರಹಿಸಿದರು. ಮಳೆ ಅಭಾವದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತೆ ಆಗಿದೆ. ಸರಕಾರ ಕೂಡಲೇ ಬರಗಾಲ ಘೋಷಣೆಮಾಡಿ ಪ್ರತಿ ಎಕರೆಗೆ ೫೦ ಸಾವಿರ ರೂ ಪರಿಹಾರ ಘೋಷಿಸಬೇಕು ಎಂದರು





Recent Comments