Thursday, September 10, 2026
Google search engine
Homeರಾಜ್ಯರಾಯಚೂರು ರೈಲು ನಿಲ್ದಾಣಕ್ಕೆ ಡಿಆರ್ ಎಂ ಸಿ.ಎನ್.ಗುಪ್ತಾ ಭೇಟಿ: ಸೌಕರ್ಯ ವೀಕ್ಷಣೆ

ರಾಯಚೂರು ರೈಲು ನಿಲ್ದಾಣಕ್ಕೆ ಡಿಆರ್ ಎಂ ಸಿ.ಎನ್.ಗುಪ್ತಾ ಭೇಟಿ: ಸೌಕರ್ಯ ವೀಕ್ಷಣೆ

ರಾಯಚೂರು: ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕುರಿತು ಗುಂತಕಲ್ ವಿಭಾಗದ ವ್ಯವಸ್ಥಾಪಕಬಸಿ.ಎನ್.ಗುಪ್ತಾ ರಾಯಚೂರು ರೈಲು ನಿಲ್ದಾಣ ವೀಕ್ಷಣೆ ನಡೆಸಿದರು. ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಗುಣಮಟ್ಟ ಹಾಗೂ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಮನವಿ: ರಾಯಚೂರು ರೈಲ್ವೆ ಸ್ಟೇಷನ್ ಸಲಹಾ ಸಮಿತಿ ಸದಸ್ಯರುಗಳಾದಎ. ಚಂದ್ರಶೇಖರ. ಎಂ. ಮರೆಪ್ಪ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎದುರಾಗುತ್ತಿರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ, ನಿಲ್ದಾಣದ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವಂತೆ ಒತ್ತಾಯಿಸಿದರು. ವಿಶೇಷವಾಗಿ ಕಟ್ಟಡ ಕಾಮಗಾರಿ ಕಳಪೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ಪ್ರಯಾಣಿಕರ ವಿಶ್ರಾಂತಿಗಾಗಿ ಅಗತ್ಯ ಸೌಲಭ್ಯ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು.ಅದೇ ರೀತಿ ಪ್ಲಾಟ್‌ಫಾರ್ಮ್ ಸಂಖ್ಯೆ 1ರಲ್ಲಿ ಸಾಮಾನ್ಯ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಸ್ಥಾಪಿಸುವುದು, ಪ್ರಯಾಣಿಕರಿಗೆ ಸುಲಭ ಪ್ರವೇಶ ವ್ಯವಸ್ಥೆ ಕಲ್ಪಿಸುವುದು, ನಿಲ್ದಾಣದ ವಿವಿಧ ಭಾಗಗಳಲ್ಲಿ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವುದು ಹಾಗೂ ಲಿಫ್ಟ್ ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ರೈಲು ನಿಲ್ದಾಣದಲ್ಲಿರುವ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ಕಾಲಮಿತಿಯೊಳಗೆ ಅಗತ್ಯ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಒದಗಿಸಬೇಕು ಎಂದು ಸಮಿತಿ ಸದಸ್ಯರು ಮನವಿ ಮಾಡಿದರು. ರೈಲ್ವೆ ನಿಲ್ದಾಣ ಮ್ಯಾನೇಜರ ಸೇರಿ ತಾಂತ್ರಿಕ ವಿಭಾಗದ ಅಧಿಕಾರಿಗಳಿದ್ದರು.

RELATED ARTICLES
- Advertisment -
Google search engine

Most Popular

Recent Comments