Friday, April 17, 2026
Google search engine
Homeರಾಜ್ಯಯಾದಗಿರಿಯ ದೇವಾಪೂರ ಬಳಿ ಭೀಕರ ರಸ್ತೆ ಅಪಘಾತ: ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನ

ಯಾದಗಿರಿಯ ದೇವಾಪೂರ ಬಳಿ ಭೀಕರ ರಸ್ತೆ ಅಪಘಾತ: ಕಾರಿನಲ್ಲಿದ್ದ ಆರು ಮಂದಿ ಸಜೀವ ದಹನ

ಯಾದಗಿರಿ: ಜಿಲ್ಲೆಯ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಪುರ ಕ್ರಾಸ್ ಸಮೀಪದ ದೇವಾಪುರ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ದಾರುಣವಾಗಿ ಸಜೀವ ದಹನಗೊಂಡಿದ್ದಾರೆ.

ಬೆಳಗ್ಗೆ ಸುಮಾರು 9.45ರ ವೇಳೆಗೆ ಯಾದಗಿರಿಯಿಂದ ರಾಯಚೂರು ಕಡೆಗೆ ಸಾಗುತ್ತಿದ್ದ ಕಾರು ಹಾಗೂ ಬೆಂಗಳೂರಿನಿಂದ ಕಲಬುರಗಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರಿಗೆ ತಕ್ಷಣ ಬೆಂಕಿ ತಗುಲಿ, ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ಇದನ್ನೂ ಓದಿ: ಮಂತ್ರಾಲಯ ಸಮೀಪ ಭೀಕರ ರಸ್ತೆ ಅಪಘಾತ: 8 ಜನರ ಸಾವು

ಘಟನೆಯ ಭೀಕರತೆಯಿಂದ ಕಾರಿನಲ್ಲಿದ್ದ ಆರು ಮಂದಿ ಹೊರಬರಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿದ್ದು, ದೇಹಗಳು ಗುರುತಿಸಲಾಗದ ಮಟ್ಟಿಗೆ ಕರಕಲಾಗಿವೆ. ಮೃತರ ಗುರುತು ಮತ್ತು ವಿಳಾಸ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇವೇಳೆ, ಬಸ್‌ಗೂ ಬೆಂಕಿ ತಗುಲಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಸ್ಥಳದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾಗಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿತು.

RELATED ARTICLES
- Advertisment -
Google search engine

Most Popular

Recent Comments