ರಾಯಚೂರು, ಜು.೬- ಜಿಲ್ಲೆಯ ಬಳಗಾನೂರು ಪೊಲೀಸರು ಧಾಳಿನಡೆಸಿ ಇಬ್ಬರು ಗಾಂಜಾ ಸಾಗಾಣೆ ಮಾಡುತ್ತಿರುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ೨೦ ಲಕ್ಷ ರು ಮೌಲ್ಯ ದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಬಂಧಿತರನ್ನು ಸಿಂಧನೂರು ತಾಲುಕಿನ ಆರ್.ಎಚ್.ಕ್ಯಾಂಪಿ-೨ ನಿವಾಸಿ ದೀನ ಬಂಧುಮಂಡಲ ಮತ್ತು ಬಸವರಾಜೇಶ್ವರಿ ಕ್ಯಾಂಪಿನ ನಿವಾಸಿ ಶಂಭು ಸರದಾರ ಎಂಬುವವರನ್ನು ಬಂಧಿಸಿ ಬೈಕ್ ಸಮೇತ ೨೦ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆದಿದ್ದು ಇನ್ನಷ್ಟು ಮಾಹಿತಿ ಬಹಿರಂಗ ವಾಗಬೇಕಿದೆ.ಬಾಂಗ್ಲಾ ಕ್ಯಾಂಪಿನಲ್ಲಿ ನಡೆಯುತ್ತಿರುವ ಅಕ್ರಮಗಳು ಬಯಲಾಗಬೇಕಿದೆ. ಅರೋಪಿಗಳನ್ನು ಬಂಧಿಸಲು ತನಿಖಾವತಂಡದಲ್ಲಿ ಡಿವೈಎಸ್ಪಿ ಚಂದ್ರಶೇಖರ, ಸಿಂಧನೂರು ಗ್ರಾಮೀಣ ವೃತ್ತ ದವಸಿಪಿಐ ವಿನಾಯಕ, ಪಿಐ ವೀರಾರೆಡ್ಡೊ, ಬಳಗಾನೂರು ಪಿಎಸ್ಐ ಮರಿಯಪ್ಪ ಪಿಎಸ್ಐ ಮೌನೇಶ ರಾಥೋಡ, ಸುಜಾತ ಸೇರಿ ಸಿಬ್ಬಂದಿಗಳ ಕಾರ್ಯಕ್ಕೆ ಎಸ್ಪಿ ಅರುಣಾಂಗ್ಷು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.





Recent Comments