Wednesday, July 29, 2026
Google search engine
Homeರಾಯಚೂರುರಾಯಚೂರು ನಗರಜು.೮ ರಂದು ಮಾಜಿ ಸಚಿವ ಎಂ.ಎಸ್.ಪಾಟೀಲ್ ರಿಗೆ ಅಭಿನಂದನಾ ಗ್ರಂಥ ಲೋಕಾರ್ಪಣೆ- ಎ.ಪಾಪಾರೆಡ್ಡಿ

ಜು.೮ ರಂದು ಮಾಜಿ ಸಚಿವ ಎಂ.ಎಸ್.ಪಾಟೀಲ್ ರಿಗೆ ಅಭಿನಂದನಾ ಗ್ರಂಥ ಲೋಕಾರ್ಪಣೆ- ಎ.ಪಾಪಾರೆಡ್ಡಿ

ರಾಯಚೂರು,ಜು.೬- ಮಾಜಿ ಸಚಿವ ಎಂ.ಎಸ್.ಪಾಟೀಲರಿಗೆ ಅಭಿನಂದನಾ ಸಮಾರಂಭದ ಮತ್ತು ಮಾಗಿದನಮತ್ಸದ್ದಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಜು.೮ ರಂದು ರಾಯಚೂರು ನಗರದ ಗಂಜ್ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.ಅವರಿಂದು ಮಾಧ್ಯಮ ಗೋಷ್ಟಿ ಉದ್ದೇಶಿಸಿ ಹಿರಿಯರಾದ ಎಂ.ಎಸ್.ಪಾಟೀಲ್ ಅನೇಕ ಹುದ್ದೆಗಳನ್ನು ನಿರ್ವಹಿಸಿದವರು. ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ದ್ದರು ಅಭಿವೃದ್ಧಿ ವಿಷಯದಲ್ಲಿ ಬೆಂಬಲವಾಗಿ ನಿಂತಿದ್ದರು. ಅವರ ವಿರುದ್ದ ರಾಜಕೀಯವಾಗಿ ಟೀಕಿಸಿದರೂ ಯಾವುದೇ ಬೇಸರ ವ್ಯಕ್ಯಪಡಿಸದೇ ಸಹಕರಿಸಿದರು.ಅವರನ್ನು ಅಭಿನಂದಿಸಿ ಅವರ ಜೀವನ,ರಾಜಕೀಯ ಕುರಿತು ಅಭಿನಂದನಾ ಗ್ರಂಥ ಸಮರ್ಪಿಸುವ ದಾಗಿ ಹೇಳಿದರು.ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ ರಾಜಕೀಯ ವಾಗಿ ಎಂ.ಎಸ್.ಪಾಟೀಲ ವಿರುದ್ದ ಸ್ಪರ್ಧಿಸಿ ದ್ದ ಪಾಪಾರೆಡ್ಡಿ ಯವರು ಬೇರೆ ಪಕ್ಷದವರಾದರೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಿರುವದು ಮಾದರಿಯಾಗಿದೆ.ಕಾರ್ಯಕ್ರಮ ಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ,ರಮೇಶ ಕುಮಾರ ಸೇರಿ ಅನೇಕ ಒಡನಾಡಿಗಳು ಭಾಗವಹಿಸಲಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular

Recent Comments