ರಾಯಚೂರು: ಜೂ.20-ಜುಲೈ 1ರಿಂದ ಜಾರಿಗೆ ಬರಲಿರುವ ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ (VB – G RAM G) ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾನದಂಡಗಳ ಆಧಾರದ ಮೇಲೆ ಜಿಲ್ಲೆಯಲ್ಲಿ ಜಾರಿಗೊಳಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. 2026-27ನೇ ಸಾಲಿಗೆ ಸಂಬಂಧಿಸಿ ಕ್ರಿಯಾ ಯೋಜನೆ ಇದುವರೆಗೂ ಯಾವ ತಾಲೂಕಿನಿಂದ ಸಲ್ಲಿಕೆಯಾಗಿಲ್ಲ, ಶೀಘ್ರವೇ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಸೂಚಿಸಿದರು. ಅವರಿಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರದವು ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಈಗಾಗಲೇ ಕೇಂದ್ರದಿಂದ ಮಾರ್ಗ ಸೂಚಿಗಳನ್ನು ನೀಡಿದೆ ಸರ್ಮಪಕವಾಗಿ ಅಧ್ಯಯನ ಮಾಡಿ ಅನುಷ್ಠಾನ ಮಾಡಬೇಕೆಂದರು. ನರೇಗಾ ಯೋಜನೆಯಡಿಯಲ್ಲಿ ಓಂಬುಡ್ಸಮನ್ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಸಾಮಾಜಿಕ ಲೆಕ್ಕ ಪರಿಶೋಧನೆ ವಸೂಲಾತಿ ಮೊತ್ತವನ್ನು ಶೀಘ್ರವೇ ನರೇಗಾ ಖಾತೆಗೆ ಜಮಾ ಮಾಡಬೇಕೆಂದು ಸೂಚಿಸಿದರು. ತಾಲೂಕುವಾರು ನೀಡಿರುವ ಮಾನವ ದಿನಗಳ ಗುರಿ ಅನುಗನವಾಗಿ ಸೃಜನೆ ಮಾಡಬೇಕೆಂದು ತಿಳಿಸಿದರು. ತಾಲೂಕವಾರು ತೆರಿಗೆ ವಸೂಲು ಮಾಡುವ ಬಗ್ಗೆ ಜಿಲ್ಲಾ ಪಂಚಾಯತ ವತಿಯಿಂದ ತಂಡ ರಚನೆ ಮಾಡಿ ಪರಿಶೀಲನೆ ಮಾಡಲು ದಿನಾಂಕ ನಿಗದಿಪಡಿಸಬೇಕು. ಜೂನ್ 4ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿ, ನೌಕರರು ಕಡ್ಡಾಯವಾಗಿ ಕಾಮ್ಸ್ ಮೊಬೈಲ್ ಆಪ್ ಅಪ್ಲಕೇಷನ್ ನಲ್ಲಿ ಇದೇ ತಿಂಗಳ 31ರೊಳಗಾಗಿ ನೋಂದಣೆ ಮಾಡಿಕೊಂಡು ಹಾಜರಾತಿ ಹಾಕಬೇಕು. ಒಂದು ವೇಳೆ ಹಾಜರಾತಿ ಹಾಕದಿದ್ದಲ್ಲಿ ಜುಲೈ 1ರಿಂದ ಹೆಚ್.ಆರ್.ಎಂ.ಎಸ್ ಹಾಗೂ ಕಾಮ್ಸ್ ಆಪ್ ಗೆ ಲಿಂಕ್ ಮಾಡುವದರಿಂದ ಮುಂದಿನ ವೇತನ ಕಡಿತಗೊಳಿಸಲಾಗುತ್ತದೆ. ಈ ನಿಟ್ಟಿನಲ್ಲಿ ಇದುವರೆಗೂ ಕರ್ತವ್ಯ ಮೊಬೈಲ್ ಅಪ್ಲಕೇಷನ್ ನಲ್ಲಿ ನೋಂದಾಯಿಸದ ಅಧಿಕಾರಿ, ನೌಕರರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕೆಂದರರು.ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶರಣಬಸವರಾಜ ಅವರು ಮಾತನಾಡಿ, ವಿಕಸಿತ ಭಾರತ – ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿತ ಮಿಷನ್ ಗ್ರಾಮೀಣ (VB – G inRAM G) ಯೋಜನೆ ಕುರಿತು ಕಾಯ್ದೆ, ಅದರ ಉದ್ದೇಶಗಳು, ಪ್ರಮುಖ ಅಂಶಗಳು ಹಾಗೂ ಪರಿಣಾಮಕಾರಿ ಅನುಷ್ಠಾನದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಈ ವೇಳೆ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಹಾಗೂ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ವಿವಿಧ ತಾಲೂಕಿನ ನರೇಗಾ ತಾಂತ್ರಿಕ ಸಿಬ್ಬಂದಿ ವರ್ಗದವರು ಇದ್ದರು.





Recent Comments