ರಾಯಚೂರು,ಜೂ.೨೦- ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಉಚಿತ ಬಸ್ ಯೋಜನೆ ಸದುಪಯೋಗ ಪಡೆದು ಪಾಲಕರು ಹಾಗೂ ಜಿಲ್ಲೆಗೆ ಹೆಸರು ತರುವ ಶಿಕ್ಷಣ ಪಡೆದು ಉನ್ನತ ಶಿಕ್ಷಣ ಪಡೆದು ಉದ್ಯೊಗ ಪಡೆದು ಸಮಾಜ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಸಲಹೆ ನೀಡಿದರು.ಅವರಿಂದು ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಿಂದ ಆಯೋಜಿಸಲಾಗಿದ್ದ ಉಚಿತ ಬಸ್ ವಿತರಣೆ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಿ ಮಾತನಾಡಿದರು.ಸಿಎಂ ಡಿ.ಕೆ.ಶಿವುಕುಮಾರ ಸೂಚನೆ ಮೇರೆಗೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವಿತರಣೆ ಮಾಡುವ ಯೋಜನೆ ಜಾರಿಗೊಳಿಸಲಾಗಿದೆ. ಬಡ ಮಕ್ಕಳಿಗೆ ಆರ್ಥಿಕ ಹೊರೆಯಾಗದಂತೆ ಉಚಿತ ಬಸ್ ಪಾಸ್ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿ ಗಳು ಯೋಜನೆ ಸದುಪಯೋಗ ಪಡೆದು ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಿ ಯೋಜನೆ ಯ ಸಾರ್ಥಕ ನಡೆಸಿಕೊಳ್ಳುವ ಕೆಲಸ ಮಾಡಬೇಕು. ಶೈಕ್ಷಣಿಕ ಬದಲಾವಣೆಯಿಂದ ಸಮಾಜ ದ ಬದಲಾವಣೆಯಾಗಲು ವಿದ್ಯಾರ್ಥಿ ಗಳು ಮುಂದಾಗಬೇಕು ಎಂದರು.ಈ ಸಂದರ್ಬದಲ್ಲಿ ಎಸ್ಪಿ ಅರುಂಷ್ಣುಗಿರಿ,ಕೆಕೆಅರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ,ಶ್ರೀಧರರೆಡ್ಡಿ,, ಡಿಬೈಎಸ್ಪಿಶಾಂತಮೂರ್ತಿ ಸೇರಿದಂತೆ ಅನೇಕರು ಇದ್ದರು.






Recent Comments