ರಾಯಚೂರು. ಅಗಸ್ಟ್.6.- ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಬುಧವಾರ ರಾತ್ರಿ ರಾಯಚೂರು ನಗರದ ಹೊರ ವಲಯದಲ್ಲಿರುವ ಮೋರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಆಕಸ್ಮಿಕ ಬೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಸರಿಯಾದ ರೀತಿಯಲ್ಲಿ ಊಟ ಮತ್ತು ಇತರೆ ಸೌಲಭ್ಯಗಳನ್ನು ಸಿಗುತ್ತಿವೆಯೆ ಎಂಬುದರ ಕುರಿತು ಪರಿಶೀಲಿಸಿದರು.ವಸತಿ ನಿಲಯದಲ್ಲಿ ಮೆನುವಿನ ಪ್ರಕಾರ ಮಕ್ಕಳಿಗೆ ಆಹಾರ ನೀಡಲಾಗುತ್ತಿದೆಯೆ ಎಂದು ರಿಜಿಸ್ಟರ್ ಪರಿಶೀಲನೆ ಮಾಡಿದರು. ನಂತರ ಅಡುಗೆ ಕೋಣೆಗೆ ತೆರಳಿ ಅಲ್ಲಿನ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿ ಅಡುಗೆ ಸಿಬ್ಬಂದಿಗಳು ಮಾಡುತ್ತಿದ್ದ ಆಹಾರವನ್ನು ಪರಿಶೀಲನೆ ಮಾಡಿದ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಆಹಾರ ಮಾಡಿ ಹಾಕಬೇಕು. ಬೆಳಿಗ್ಗೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಏನೇನು ಅಡುಗೆ ಮಾಡಿ ಹಾಕುತ್ತಿರಾ ಎಂದು ಅವರಿಂದ ಮಾಹಿತಿ ಪಡೆದು ಮಕ್ಕಳಿಗೆ ಯಾವುದೇ ಸಮಸ್ಯೆಗಳಾಗದಂತೆ ಸರಿಯಾದ ರೀತಿಯಲ್ಲಿ ಆಹಾರ ತೈಯಾರಿಸುವಂತೆ ಅಡುಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು ಮಕ್ಕಳೆ ತಮಗೆ ವಸತಿ ನಿಲಯಗಳಲ್ಲಿ ಚೆನ್ನಾಗಿ ಊಟ ಹಾಕುತ್ತಾರ. ತಮ್ಮ ಮೆನುವಿನ ಪ್ರಕಾರ ಮೊಟ್ಟೆ ಹಾಗೂ ಇತರೆ ಆಹಾರ ಸಿಗುತ್ತಿದೆಯೆ ಇಲ್ಲದಿದ್ದರೆ ನನಗೆ ಹೇಳಿ. ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನನಗೆ ತಿಳಿಸಿ . ಯಾರು ಭಯ ಪಡಬೇಕಾಗಿಲ್ಲ ತಮ್ಮ ಸಮಸ್ಯೆಗಳನ್ನು ಆಲಿಸಲು ನಾನು ಇಲ್ಲಿಗೆ ಬಂದಿದ್ದೆನೆ ಎಂದು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತರಬೇಕೆಂದು ಹೇಳಿದರು. ವಸತಿ ನಿಲಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಕೆಲವು ವಸತಿ ನಿಲಯಗಳಲ್ಲಿ ಆಹಾರ ಸೇವಿಸಿದ ನಂತರ ಮಕ್ಕಳು ಅಸ್ವಸ್ಥರಾದ ಪ್ರಕರಣಗಳು ಕಂಡು ಬರುತ್ತಿವೆ ಇಂತಹ ಪ್ರಕರಣಗಳು ಜಿಲ್ಲೆಯ ಯಾವುದೇ ವಸತಿ ನಿಲಯಗಳಲ್ಲಿ ಮರು ಕಳಿಸದಂತೆ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಮೆನುವಿನ ಪ್ರಕಾರ ಅವರಿಗೆ ಊಟ ನೀಡಬೇಕು. ಯಾವುದೇ ಸಮಸ್ಯೆಗಳಾದರೆ ಸಂಬಂಧಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸೂಚನೆ ನೀಡಿದರು.





Recent Comments