Wednesday, July 29, 2026
Google search engine
Homeಮುಖ್ಯಾಂಶಗಳುದೆಹಲಿಯಲ್ಲಿ ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಖಂಡನೆ

ದೆಹಲಿಯಲ್ಲಿ ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಖಂಡನೆ

ರಾಯಚೂರು,ಜು.೨೦-ದ!ಹಲಿಯಲ್ಲಿ ಪ್ರತಿಭಟನಾ ನಿರತ ಯುವ ಸಮೂಹದ ಮೇಲೆ ನಡೆದ ಲಾಟಿ ಚಾರ್ಜ್ ಖಂಡನೀಯ ಎಂದು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ತಿಳಿಸಿದ್ದಾರೆ‌.ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ವತಿಯಿಂದ ಸಾವಿರಾರು ಯುವಕ-ಯುವತಿಯರು ನೀಟ್ ಸೇರಿದಂತೆ ವಿವಿಧ ಹಕ್ಕೊತ್ತಾಯಕ್ಕಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹವನ್ನು ತಡೆದು, ಢಪ್ರತಿಭಟನಾ‌ನಿರತ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ಏಕಾಯಕಿ ಲಾಟಿ ಚಾರ್ಜ್ ಮಾಡಿರುವುದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನು ತಲೆತಗ್ಗಿಸುವ ವಿಷಯವಾಗಿದೆ ಎಂದಿದ್ದಾರೆ.ಯುವಕರು ತಮಗೆ ಬೇಕಾದ ನ್ಯಾಯವನ್ನು‌ ಹೋರಾಟದ ಮೂಲಕ ಕೇಳುತ್ತಿರುವಾಗ ಉತ್ತರಿಸಲಾಗದ ಕೇಂದ್ರ ಸರ್ಕಾರ, ಶಿಕ್ಷಣ ಮಂತ್ರಿಗಳು ಯುವಕರ ಮೇಲೆ ಪೊಲೀಸರನ್ನು‌ ಬಿಟ್ಟು ಲಾಟಿ‌ ಚಾರ್ಜ್ ಮಾಡಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.ಕೂಡಲೇ ಲಾಟಿ ಚಾರ್ಜ್ ನಿಲ್ಲಿಸಿ, ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಿ, ಮುಂದಿನ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments