ರಾಯಚೂರು. ಜುಲೈ. 20.- ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಸೋಮವಾರ ಗಣೇಕಲ್ ಜಲಾಶಯಕ್ಕೆ ಭೇಟಿ ನೀಡಿ ಎಷ್ಟು ನೀರು ತುಂಬಿದೆ ಎಂದು ಪರಿಶೀಲನೆ ಮಾಡಿದರು. ನಂತರ ನಾಗಡದಿನ್ನಿ. ಅತ್ತನೂರ ಹಾಗೂ ಶಿರವಾರ ಕಾಲುವೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಕಾಲುವೆಗೆ ಬಿಟ್ಟಿರುವ ನೀರು ಕುಡಿಯುವ ನೀರಿಗೆ ಉಪಯೋಗವಾಗಬೇಕು ಮತ್ತು ಅನಾವಶ್ಯಕವಾಗಿ ಪೋಲಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೆಶನ ನೀಡಿದ ಜಿಲ್ಲಾಧಿಕಾರಿಗಳು ಸಾರ್ವಜನಿಕರು ಯಾವುದೇ ಕಾರಣಕ್ಕೆ ಕಾಲುವೆಗಳ ಗೇಟಗಳನ್ನು ಓಪನ್ ಮಾಡಬಾರದು ಹಾಗೇನಾದರೂ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಶಿರವಾರ ತಹಶಿಲ್ದಾರ ಅಶೋಕ ಪವಾರ್ ನೀರಾವರಿ ಇಲಾಖೆಯ ಅಧಿಕಾರಿಗಳು ಪಿಡಿಓ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.





Recent Comments