ರಾಯಚೂರು.ಜು.೨೦- ಹೋರಾಟಗಾರ ಸೋನಂ ವಾಂಗ್ಚುಕ್ ಇವರನ್ನು ಒತ್ತಾಯ ಪೂರಕ ಆಸ್ಪತ್ರಗೆ ದಾಖಲು, ಸಂಸತ್ಮುತ್ತಿಗೆ ಹಾಕಲು ಹೋರಾಟ ಗಾರರ ಮೇಲೆ ಲಾಠಿ ಪ್ರಹಾರ ನಡೆಸಿರುವ ಕೇಂದ್ರದ ಕ್ರಮ ವಿರೋದಿಸಿ ಯುವ ವಿದ್ಯಾರ್ಥಿಗಳು ತೀವ್ರ ಆಕ್ರೋಶ ಹೊರಹಾಕಿವೆ.ಎಐಡಿಎಸ್ಓ, ಸಿಪಿಐ(ಎಂ), ವಿದ್ಯಾರ್ಥಿ ಯುವಜನರ ಸಂಘ ಸೇರಿದಂತೆ ನೂರಾರು ಜನರು ಕೇಂದ್ರ ಬೇಜವಬ್ದಾರಿತನಕ್ಕೆ ಧಿಕ್ಕಾರ ಹೇಳಿವೆ. ರಾಯಚೂರು ನಗರದಲ್ಲಿ ಪ್ರತ್ಯೇಕ ಹೋರಾಟ ನಡೆಸಿದ ಪ್ರತಿಭಟನಾಕಾರರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕೇಂದ್ರ ಶಿಕ್ಷಣ ಸಚಿವರ ವೈಫಲ್ಯ ಕಾರಣವಾಗಿದೆ.ನೈತಿಕ ಹೊಣೆ ಹೊರಬೇಕಾದ ಸಚಿವ ಧಮೇಂದ್ರ ಪ್ರಧಾನ ಲಜ್ಜೆಗೆಟ್ಟು ಅಧಿಕಾರ ಬಿಡುತ್ತಿಲ್ಲ. ಕೂಡಲೇ ಸಚಿಔಧರ್ಮೆಂದ್ರ ಪ್ರಧಾನವರಾಜಿನಾಮೆ ನೀಡಬೇಕು,ಸಮಗ್ರ ತನಿಖೆ ನಡೆಸಬೇಕೆಂದು ಅಗ್ರಹಿಸಿ ಹೋರಾಟ ನಡೆಯಿತು.







Recent Comments