ರಾಯಚೂರು ,ಜೂ.- ಕಾಂಗ್ರೇಸ ಪಕ್ಷದ ಸರಕಾರ ಸುಳ್ಳು ನಕಲಿ ಮತದಾರರನ್ನು ಸೇರಿಸುವಂತೆ ಬಿಎಲ್ ಓ ಅವರ ಒತ್ತಡ ಮಾಡುತ್ತಿದ್ದಾರೆ ಈಗಗಾಲೆ ಅಂಗನವಾಡಿ ಕಾರ್ಯಕರತರು ಎಸ್ಐ ಆರ್ ಕೆಲಸ ಮಾಡುವದಿಲ್ಲ ಹೇಳುತ್ತಿದ್ದಾರೆ ಈ ಬಗ್ಗೆ ಚುನಾವಣೆ ಆಯೋಗ ಗಭೀರವಾಗಿ ಪರಿಗಣಿಸಿಬೇಕು ನಕಲಿ ಮತದಾರರನ್ನು ತೆಗದು ಮತದಾರ ಪಟ್ಟಿ ಶುದ್ದ ಮಾಡಲು ನಮ ಪಕ್ಷದ ಕಾರ್ಯಕತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.ಅವರಿಂದು ಗ್ರಾಮೀಣ ಜೆಡಿಎಸ್ ಘಟಕದಿಂದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ವಿಶೇಷ ಮತದಾರರ ಪರಿಷ್ಕರಣೆ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕೆಲವರು ನಮಗೆ ಜವಾಬ್ದಾರಿ ನೀಡಲ್ಲ ಎಂದು ಭಾವಿಸದೆ ತಾವೇ ಹೊಣೆ ಹೊತ್ತು ಸಂಘಟನೆಗೆ ಮುಂದಾಗಬೇಕು ಎಂದರುಗ್ರಾಮೀಣ ಘಟಕದ ಮುಖಂಡ ನರಸಿಂಹ ನಾಯಕ ಮಾತನಾಡಿಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ, ಪುರಸಭೆ ಚುನಾವಣೆಗಳಲ್ಲಿ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಅಗತ್ಯ ಪ್ರಸ್ತುತ ರಾಜ್ಯದಲ್ಲಿ ಜೆಡಿಎಸ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅಲೆ ಇದೆ ಎಂದು ಕಾರಕರ್ತರು ನಿದ್ರಿಸಬಾರದು. ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಿರಬೇಕು ಕಾರ್ಯಕರ್ತರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಮ್ಮೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಅವರ ಅಭಿಮಾನ, ಪ್ರೀತಿಯೇ ನಮಗೆ ಶ್ರೀರಕ್ಷೆಯಾಗಿದೆ ಅದಕಾರಣ ಪ್ರಾಮಾಣಿಕವಾಗಿ ಕೆಲಸವನ್ನು ಬಿಎಲ್ಎ ಕೆಲಸ ಮಾಡಬೇಕು ಎಂದು ಹೇಳಿದರು.ಜಿಲ್ಲಾ ಕಾರ್ಯಾಧ್ಷಕ್ಷ ಎನ್.ಶಿವಶಂಕರ ಮಾತನಾಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಬರಲು ಪಕ್ಷದ ಕಾರ್ಯಕತರು ಹಗಲು-ಇರಳು ಕೆಲಸ ಮಾಡುವದು ಅಗತ್ಯವಾಗಿದೆ ಬಿಜೆಪಿ ಹೊಂದಾಣಿಕೆ ಆದರೂ ನಮ್ಮಪಕ್ಷ ಬಲಿಷ್ಟವಾದ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಚುನಾವಣೆ ಸ್ವರ್ಧಿಸುತ್ತಾರೆ ಎಂದರುಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷೀಪತಿಗಾಣದಾಳ ,ಗ್ರಾಮಾಂತರ ಕಾರ್ಯಾಅಧ್ಯಕ್ಷ ಅಮೇರಶ ಪಾಟೇಲ ,ನಗರ ಅಧ್ಯಕ್ಷ ಬಿ ತಿಮ್ಮಾರೆಡ್ಡಿ, ಗ್ರಾಮಾಂತರ ಅಧ್ಯಕ್ಷ ನಾಗರಾಜ್ ಗೌಡ, ಪರಿಶಿಷ್ಟ ಪಂಗಡ ಅಧ್ಯಕ್ಷ ಹಂಪಯ್ಯ ನಾಯಕ್,ಪರಿಶಿಷ್ಟ ಘಟಕದ ಅಧ್ಯಕ್ಷ ನರಸಪ್ಪ ಜಿಲ್ಲಾ ಯುವ ಅಧ್ಯಕ್ಷ ವಿಜಯಕುಮಾರ ಜಿಲ್ಲಾ ಹಿಂದುಳಿದ ಘಟಕದ ಅಧ್ಯಕ್ಷ ಜಂಬುನಾಥ ಮುಂಖಡರಾದ ಯಲ್ಲಾರೆಡ್ಡಿ, ಗೋವಿಂದರೆಡ್ಡಿ ಸರ್ಜಾಪೂರ ಎಂ ಡಿ ರಫಿ ಬಾಬು ಕಲಮಲ ಉಪಸಿತದ್ದರು





Recent Comments