ರಾಯಚೂರು,ಜೂ೧೮-ಪ್ರಜಾಪ್ರಭುತ್ವ ದೇಶದಲ್ಲಿ ಮತದಾನ ಬಹಳ ಮಹತ್ವದಾಗಿದ್ದು ವಿಶೇಷ ಪರಿಷ್ಕರಣೆ ಮೂಲಕ ಮತ್ತಷ್ಟು ಪಾರದರ್ಶಕವಾಗುತ್ತದೆ ಎಂದು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಹೇಳಿದರು.ಅವರಿಂದು ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಮಹಾನಗರಪಾಲಿಕೆ,ಸ್ವೀಪ್ ಸಮಿತಿಗಳ ಸಹಯೋಗದಲ್ಕಿ ಆಯೋಜಿಸಲಾಗಿದ್ದ ಮತದಾರರ ಪಟ್ಟಿ ಯ ವಿಶೇಷ ಪರಿಷ್ಕರಣೆ ಜಾಗ್ರತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.ವಿಶೇಷವಾಗಿ ಈ ವರ್ಷ ಇಡೀ ರಾಜ್ಯಾದ್ಯಂತ ದೇಶದ ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಿಯ ಎಸ್.ಐ.ಆರ್ ಕಾರ್ಯ ನಡೆಯುತ್ತಿದೆ. ಈಗಾಗಲೇ ಮ್ಯಾಪಿಂಗ್ ಕಾರ್ಯವನ್ನ ಬಿಎಲ್ ಒ ಅವರು ನಿರಂತರವಾಗಿ ಮಾಡುತ್ತಿದ್ದು ನಾವುಗಳು ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ನಿಮ್ಮ ಮತದಾನವನು ಭದ್ರಪಡಿಸಿಕೊಳ್ಳಬೇಕು ಎಸ್.ಐ.ಆರ್ ಯೋಜನೆ ಯಶಸ್ವಿಯಾದರೆ ಚುನಾವಣೆಗಳು ಇನ್ನಷ್ಟು ಪಾರದರ್ಶಕವಾಗುತ್ತವೆ ಎಂದರು.ಒಬ್ಬ ಮತದಾರರ ಹೆಸರು ಮೂರ್ನಾಲ್ಕು ಕಡೆ ಇರುವುದು ಕಾನೂನಬಾಹಿರವಾದದ್ದು. 2002ರ ಮತಪಟ್ಟಿ ವಿವರಗಳನ್ನೂ ಸರಿಯಾಗಿ ತುಂಬಿ ನೀಡಿ .ನಿಮ್ಮ ನಿಮ್ಮ ಮತದಾನದ ಹಕ್ಕುಉಳಿಸಿಕೊಳ್ಳಬೇಕು. ಪ್ರತಿಯೊಬ್ಬ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಯಾವುದೇ ಕಾರಣಕ್ಕೆ ಹೊರಗೆ ಉಳಿಯಬಾರದು. ಪ್ರತಿಯೊಬ್ಬರು ಎಸ್ಐಆರ್ ನಲ್ಲಿ ಪಾಲ್ಗೊಳ್ಳಿ .ಸಹಕರಿಸಿ. ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸಿ ಮಾದರಿಯ ಶುದ್ಧ ಮತದಾರ ಪಟ್ಟಿ ತಯಾರಿಸುವುದೇ ಎಸ್ಐಆರ್ ಕಾರ್ಯಕ್ರಮವಾಗಿದೆ ಎಂದರು. ಮತದಾರರ ಸಾಕ್ಷರತಾ ಕ್ಲಬ್ ನೋಡಲ್ ಅಧಿಕಾರಿ ಡಾ ದಂಡಪ್ಪ ಬಿರಾದಾರ್ ಮಾತನಾಡಿ ಮತದಾರ ಪಟ್ಟಿಯ ಪರಿಷ್ಕರಣೆ ಜಾಗೃತ ನಾಗರೀಕರ ಹೊಣಿಗಾರಿಕೆಯಾಗಿದೆ ಪ್ರತಿ ಅರ್ಹ ನಾಗರಿಕರನ್ನ ಮತ್ತು ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು .ಪ್ರತಿಯೊಬ್ಬ ನಾಗರಿಕರು ಎಸ್ಐಆರ್ ಯೋಜನೆಗೆ ಸಹಕರಿಸಿರಿ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಿರಿ ಎಂದರುಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಶಂಕರ್ ಗೌಡ, ತಾಲೂಕ್ ಪಂಚಾಯತಿ ಕಾರ್ಮಿಕರ ಅಧಿಕಾರಿಗಳಾದ ಚಂದ್ರಶೇಖರ್ ಪವಾರ್ ,ಜಿಲ್ಲಾ ಸರಕಾರಿ ನೌಕರ ಸಂಘದ ಕಾರ್ಯಧ್ಯಕ್ಷ ಡಾ. ಶಂಕರ ಗೌಡ ,ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ರಾಜಯೋಗಣನಿ ಬಿ.ಕೆ ಸ್ಮಿತ ಕ್ಕ,ತಾಲೂಕ ದೈಹಿಕ ಶಿಕ್ಷಣ ಅಧಿಕಾರಿ ಪರಶುರಾಮ್ ಎಚ್. ಭಾರತ ಸೇವಾದಳದ ವಿಭಾಗೀಯ ಸಂಚಾಲಕ ವಿದ್ಯಾಸಾಗರ್ ಚಿಮಣಗೇರಿ . ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಆಯುಷ ಯುನಾನಿ ವೈದ್ಯರು ,ತಾಲೂಕ ಪಂಚಾಯತಿಯ ಸಿಬ್ಬಂದಿಯವರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.





Recent Comments