ರಾಯಚೂರು,ಜೂ.೧೮- ಶಾಲೆ ನವೀಕರಣಕ್ಕೆ ೧೫ ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಡಿಡಿಪಿಐ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.ನಗರದ ರಾಂಪೂರನ ವಿದ್ಯಾಜ್ಯೋತಿ ಶಾಲಾ ನವೀಕರಣಕ್ಕೆ ಮಾಬಳೇಶ ಎಫ್ ಡಿಸಿ ೨೫ ಸಾವಿರ ರೂ ಬೇಡಿಕೆ ಇಟ್ಟಿದ್ದ. ಶಾಲಾ ಮುಖ್ಯಸ್ಥ ಸಿದ್ದಣ್ಣ ಮನವಿ ಮಾಡಿದರೂ ಹಣ ಕೊಟ್ಟರೆ ಮಾತ್ರ ನವೀಕರಣ ಮಾಡುವದಾಗಿ ಪಟ್ಟು ಹಿಡಿದಿದ್ದ. ಸಿದ್ದಣ್ಣ ಎಂಬುವವರ ದೂರಿನ ಮೇರೆಗೆ ಲೋಕಾಯುಕ್ತ ಎಸ್ ಪಿ ಸತೀಶ ಸಿರಗುಪ್ಪ ನೇತೃತ್ವದಲ್ಲಿ ಧಾಳಿ ನಡೆಸಿದ್ದು ೧೫ ಸಾವಿರ ರೂ ಲಂಚದ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾನೆ. ಲೋಕಾಯುಕ್ತ ಅಧಿಕಾರಿಗಳು ಮಾಬಳೇಶರನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.





Recent Comments