Wednesday, July 29, 2026
Google search engine
Homeರಾಯಚೂರುರಾಯಚೂರು ನಗರಲಂಚ ಪಡೆದಿದ್ದ ಬೀಜನಗೇರಾ ಪಿಡಿಓ ಪತಿ ಸಮೇತ ಲೋಕಾಯುಕ್ತ ಬಲೆಗೆ

ಲಂಚ ಪಡೆದಿದ್ದ ಬೀಜನಗೇರಾ ಪಿಡಿಓ ಪತಿ ಸಮೇತ ಲೋಕಾಯುಕ್ತ ಬಲೆಗೆ

ರಾಯಚೂರು: ನೀವೇಶನ ಖಾತಾ ಮಾಡಿ ಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ನಗರದಲ್ಲಿ ವರದಿಯಾಗಿದೆ.ತಾಲೂಕಿನ ಬೀಜನಗೆರಾ ಪಿಡಿಒ ಲಕ್ಷ್ಮಿ ಹಾಗೂ ಆಕೆಯ ಪತಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಉಮ್ರಾಳದೊಡ್ಡಿ ಗ್ರಾಮದಲ್ಲಿ ಮೆಹಬೂಬ್ ಎನ್ನುವವರ 2 ಎಕರೆ 6 ಗುಂಟೆ ಜಮೀನಿನಲ್ಲಿ ಲೇಔಟ್ ಮಾಡಿದ್ದರು. ಇದಕ್ಕೆ ಖಾತಾ ಮಾಡಿಕೊಡಲು ಎರಡೂವರೇ ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ದೂರುದಾರ ಮೆಹಬೂಬ್ ಪಿಡಿಒ ಪತಿಯ ಖಾತೆಗೆ ಒಂದೂವರೆ ಲಕ್ಷ ರೂ. ಹಣ ಫೋನ್ ಪೇ ಮೂಲಕ ಹಾಕಿದ್ದರು.ಬಾಕಿ ಹಣ ಕೊಡುವುದಾಗಿ ಹೇಳಿದ್ದ ದೂರುದಾರ ಹಿಂದೆ ಹಣ ಹಾಕಿದ್ದ ಸ್ಕ್ರೀನ್ ಶಾಟ್ ಗಳ ಸಹಿತ ದೂರು ನೀಡಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಪಿಡಿಒ ಮತ್ತು ಅವರ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ

RELATED ARTICLES
- Advertisment -
Google search engine

Most Popular

Recent Comments