Wednesday, July 29, 2026
Google search engine
Homeರಾಯಚೂರುರಾಯಚೂರು ನಗರಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಮಕ್ಕಳ ಕಾವಲು ಸಮಿತಿ ಸಭೆ‌ನಡೆಸಿ ವರದಿ ನೀಡಲು ಸಿಇಓ ಈಶ್ವರ ...

ಗ್ರಾಮ ಪಂಚಾಯತಿ ಮಟ್ಟದಲ್ಲಿರುವ ಮಕ್ಕಳ ಕಾವಲು ಸಮಿತಿ ಸಭೆ‌ನಡೆಸಿ ವರದಿ ನೀಡಲು ಸಿಇಓ ಈಶ್ವರ ಕಾಂದೂ ಸೂಚನೆ

ರಾಯಚೂರು,ಜೂ‌೨೪- ಗ್ರಾಮ ಪಂಚಾಯತಿ ಮಟ್ಟದಲ್ಲಿ ‌ಮಕ್ಜಳ ಕಾವಲು ಸಮಿತಿ ರಚಿಸಿ ಬಾಲ್ಯವಿವಾಹ,ಬಾಲಗರ್ಬಿಣಿ,ಪೌಷ್ಟಿಕ ತೆ ನಿವಾರಣೆ ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಸೂಚಿಸಿದರು.ಅವರಿಂದು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಗ್ರಾಮೀಣ ಭಾಗದಲ್ಲಿ ಅಪ್ರಾಪ್ತರು ಗರ್ಭಿಣಿಯರಾಗುತ್ತಿರುವದಕ್ಕೆ ಜಾಗೃತಿ ಕೊರತೆ ಕಾರಣವಾಗಿದೆ.ಕದ್ದುಮುಚ್ಚಿ ನಡೆಯುವ ಬಾಲ್ಯವಿವಾಹಗಳು ತಡೆಯಲು ೧೦೯೫ ಕರೆ‌ಮಾಡುವ ಕುರಿತು ಜಾಗೃತಿ ಮೂಡಿಸಬೇಕಿದೆ. ಗ್ರಾಮ ಮಕ್ಕಳು,, ಪಂಚಾಯತಿ ಸದಸ್ಯರು, ಶಿಕ್ಷಕರು ಒಳಗೊಂಡ ಮಕ್ಕಳ ಕಾವಲು ಸಮಿತಿ ಸಭೆಯ ಅನುಪಾಲನ ವರದಿ ಸಲ್ಲಿಸಬೇಕು.ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಯಾನಲ ತಾಲೂಕುಗಳ ಪಂಚಾಯಿತಿ ಸಭೆಗಳ ಮೇಲುಸ್ತುವಾರಿ ಮಾಡಬೇಕು ಎಂದರು.ಕಳೆದ ಎರಡು ವರ್ಷದ ಅವಧಿಯಲ್ಲಿ ಬಾಲ್ಯ ವಿವಾಹ,ಬಾಲಗರ್ಬಿಣಿಯರ ಸಂಖ್ಯೆ ಏರಿಕೆಯಾಗುತ್ತಿರುವ ಕಳವಳಕಾರಿಯಾಗಿದೆ.ಪಂಚಾಯತಿ ಮಟ್ಟದಲ್ಲಿ ಬಾಲ್ಯವಿವಾಹ ತಡೆಯಬೇಕು. ಪಂಚಾಯತಿ ಪಿಡಿಓ ವಿಶೇಷ ಗಮನ ನೀಡಬೇಕು ಎಂದು ಸೂಚಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ಹಕ್ಕುಗಳ ರಕ್ಷಣೆ ಗೆ ವಿಶೇಷ ಯೋಜನೆ ರೂಪಿಸಿದ್ದರು ನಿಗಧಿತ ಪ್ರಗತಿ ಕಾಣುತ್ತಿಲ್ಲ. ಬೇರೆ ಜಿಲ್ಲೆ ಹೋಲಿಸಿದರೆ ಜಿಲ್ಲೆ ಇನ್ನಷ್ಟು ಸಾಧಿಸಬೇಕಿದೆ. ಮಕ್ಕಳು ಶಾಲೆಗೆ ಸೇರಿಸುವದು,ಬಾಲಕಾರ್ಮಿಕತೆ ಮುಕ್ತ ಗೊಳಿಸಲು ಎಲ್ಲರಚಸಹಕಾರ ಅಗತ್ಯ ವಾಗಿದೆ. ಈ ನಿಟ್ಟನಲ್ಲಿ ಗ್ರಾಮ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ‌ಜಿ.ಪಂ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ,ಶರಣಬಸವ ಕೆಸರಹಟ್ಟಿ, ಲೆಕ್ಕಾಧಿಕಾರಿ ವಿಜಯ ಶಂಕರ ಸೇರಿ ಅಧಿಕಾರಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular

Recent Comments