ರಾಯಚೂರು,ಜೂ.೨೦- ಸರಳ,ಸಜ್ಜನಿಕೆ ರಾಜಕಾರಣಿ ಎನ್.ಎಸ್.ಬೋಸರಾಜರಿಗೆ ಸಚಿವ ನೀಡಬೇಕೆಂದು ನಗರಸಭೆ ಮಾಜಿ ಸದಸ್ಯ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಮಾಜಿ ಅಧ್ಯಕ್ಷ ಪಿ.ನರಸಪ್ಪ ಒತ್ತಾಯಿಸಿದ್ದಾರೆ.ಸುದ್ದಿ ಗೋಷ್ಟಿ ಮಾತನಾಡಿ ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ಗೆ ಅವರ ಕೊಡುಗೆಯಿದೆ. ಅಂತಹವರು ಸಚಿವರಾದರೆ ಮತ್ತಷ್ಟು ಅಭಿವೃದ್ಧಿ ಯಾಗಲು ಸಹಕಾರಿಯಾಗುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ ಮಾದಿಗ ಸಮಾಜದವರಲ್ಲ.ಅವರು ಕ್ರಿಸ್ಚಿಯನ್.ಹರಿಜನವಾಡದ ಚರ್ಚನಲ್ಲಿ ಮತಾಂತರವಾಗಿದ್ದಾರೆ. ಅಲ್ಲದೇ ಪ್ರಕರಣ ಒಂದರಲ್ಲಿ ಶಿಕ್ಷೆ ಗುರಿಯಾಗಿದ್ದಾರೆ. ಅವರು ಪರಿಷತ್ ಸದಸ್ಯರಾಗಲು ಅರ್ಹರಲ್ಲ. ಅವರ ಶಾಲಾ ದಾಖಲೆಯಲ್ಲಿ ಮಾದಿಗ ಎಂದು ಇದ್ದರೆ ಸಾಬೀತು ಪಡಿಸಬೇಕು ಎಂದು ಸವಾಲು ಹಾಕಿದರು.





Recent Comments