Wednesday, July 29, 2026
Google search engine
Homeಮುಖ್ಯಾಂಶಗಳುಹಂಚಿನಾಳ ಕ್ಯಾಂಪಿನಲ್ಲಿ ಜೋಳಿಗೆಯಲ್ಲಿ ಮಲಗಿದ್ದಮಗುವನ್ನು ಹೊತ್ತೊಯ್ದ ನಾಯಿಗಳು

ಹಂಚಿನಾಳ ಕ್ಯಾಂಪಿನಲ್ಲಿ ಜೋಳಿಗೆಯಲ್ಲಿ ಮಲಗಿದ್ದಮಗುವನ್ನು ಹೊತ್ತೊಯ್ದ ನಾಯಿಗಳು

ರಾಯಚೂರು,ಜು.೧೬- ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಧಾರುಣ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಮೃತ ಮಗುವನ್ನು ಅನಂ ಅಬ್ದುಲ್ ರಜಾಕ್ (1½) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಸೀರೆಯಿಂದ ಕಟ್ಟಿದ ಜೋಳಗಿಯಲ್ಲಿ ಮಗುವನ್ನು ಮಲಗಿಸಲಾಗಿದ್ದಾಗ ಘಟನೆ ನಡೆದಿದೆ. ಪೋಷಕರು ಮನೆಯ ಮುಂಭಾಗದಲ್ಲೇ ಕಟ್ಟೆಯ ಮೇಲೆ ಮಲಗಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಬೀದಿ ನಾಯಿಗಳು ಜೋಳಗಿಯಲ್ಲಿದ್ದ ಮಗುವಿನ ಮೇಲೆ ದಾಳಿ ನಡೆಸಿ ಎಳೆದೊಯ್ದಿವೆ ಎಂದು ತಿಳಿದುಬಂದಿದೆ.ಯಾವುದೆ ಪ್ರಕರಣ ದಾಖಲಾಗಿಲ್ಲ.

RELATED ARTICLES
- Advertisment -
Google search engine

Most Popular

Recent Comments