ರಾಯಚೂರು,ಜು.೧೦- ತಾಲುಕಿನ ಇಡಪನೂರು ಪೋಲಿಸ್ ಠಾಣಾ ವ್ಯಾಪ್ತಿಯ ಹಂಚಿನಾಳ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಮೇಘನಾಥ ಮೃತಪಟ್ಟ ಘಟನೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.ಬುಧವಾರ ಪೆಟ್ರೋಲ್ ಬಂಕ್ ನಲ್ಲಿ ಮಹೇಶನು ಪೆಟ್ರೋಲ್ ತೆಗೆದುಕೊಂಡ ಹಣದ ಪೈಕಿ 10 ರೂಪಾಯಿಗಳನ್ನು ಕಡಿಮೆ ಕೊಟ್ಟಿದ್ದಕ್ಕೆ ಪೆಟ್ರೋಲ್ ಬಂಕ್ ನ ರವಿ ಈತನು ಮಹೇಶನೊಂದಿಗೆ ಜಗಳ ಮಾಡುತ್ತಿದ್ದಾಗ ನಾಗರಾಜನು ಪೆಟ್ರೋಲ್ ಬಂಕ್ ಗೆ ಹೋಗಿದ್ದ .ಅವನೊಂದಿಗೆ ಹೋಗಿದ್ದ ಮೇಘನಾಥ ಇವನು ಪೆಟ್ರೋಲ್ ಬಂಕ್ ಗೆ ಜಗಳ ಬಿಡಿಸಿಕೊಳ್ಳಲು ಹೋದಾಗ ಪೆಟ್ರೋಲ್ ಬಂಕ್ ನಲ್ಲಿದ್ದ ಆರೋಪಿತರು ಗುಂಪು ಕಟ್ಟಿಕೊಂಡು ಬಂದು ನರಸಿಂಹಲು ಮತ್ತು ಮಾರೆಪ್ಪ ಇವರು ಮೇಘನಾಥನಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಕಟ್ಟಿಗೆ ಹೊಡೆದಿದ್ದರು. ವೀರೇಶನು ಮೇಘನಾಥನನ್ನು ಕೊಲೆ ಮಾಡುವ ಉದ್ದೇಶದಿಂದ ಒಂದು ಕಟ್ಟಿಗೆ ತೆಗೆದುಕೊಂಡು ಬಂದು ಮೇಘನಾಥನ ತಲೆಗೆ ಹೊಡೆದಿದ್ದು ರವಿ ಇವನು ಕಟ್ಟಿಗೆ ತೆಗೆದುಕೊಂಡು ಬಂದು ಮತ್ತೆ ಮೇಘನಾಥನ ತಲೆಯ ಮೇಲೆ ಹೊಡೆದಿದ್ದು ಆಗ ನರಸಿಂಹ ಈತನು ಕಟ್ಟಿಗೆ ತೆಗೆದುಕೊಂಡು ಬಂದು ಮೇಘನಾಥನ ಬೆನ್ನಿಗೆ ಜೋರಾಗಿ ಹೊಡೆದಿದ್ದಕ್ಕೆ ಮೇಘನಾಥನು ಮೂರ್ಚೆ ಹೋಗಿ ಬಿದ್ದಿದ್ದು ಜಗಳ ಬಿಡಿಸಿಕೊಳ್ಳಲು ಹೋದ ಮಹೇಶ ಮತ್ತು ನಾಗರಾಜನಿಗೆ ಇನ್ನುಳಿದ ಆರೋಪಿತರು ಕೈಗಳಿಂದ ಹೊಡೆ-ಬಡೆ ಮಾಡಿದ್ದಾಗಿ ಗಾಯಗೊಂಡ ಮೇಘನಾಥನನ್ನು ಕಾರಿನಲ್ಲಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ತಲೆಗೆ ಹೊಡೆದ ಬಾರಿ ಗಾಯಗಳಿಂದ ಮೃತ ಪಟ್ಟಿದ್ದು ತನ್ನ ಗಂಡನ ಕೊಲೆಗೆ ಕಾರಣ ಎಂದು ಪತ್ನಿ ನೀಡಿದ ದೂರಿನ ಮೆರಗೆ ಪ್ರಕರಣ ದಾಖಲಾಗಿತ್ತು .ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿಗಳಾದ 1) ರವಿ ತಂದೆ ಭೀಮೇಶ್ 2) ವೀರೇಶ ತಂದೆ ನಲ್ಲಾರೆಡ್ಡಿ 3) ನರಸಿಂಹ ತಂದೆ ತಾಯಣ್ಣ 4) ಮಾರೆಪ್ಪ ತಂದೆ ಮಲ್ಲೇಶ 5) ರಮೇಶ ತಂದೆ ನಲ್ಲಾರೆಡ್ಡಿ 6)ಪ್ರವೀಣ ತಂದೆ ಜಯರಾಮ ಇವರನ್ನು ಬಂಧಿಸಲಾಗಿದೆ.





Recent Comments