Wednesday, July 29, 2026
Google search engine
Homeಮುಖ್ಯಾಂಶಗಳುಸಹಪ್ರಾಧ್ಯಾಪಕನ ಮೇಲೆ ಹಲ್ಲೆ: ಕೃಷಿ ವಿಶ್ವವಿದ್ಯಾಲಯ ಶಿಕ್ಷಣ ಸಹಾಯಕ ಆಡಳಿತಾಧಿಕಾರಿ ಸಿದ್ದರಾಮ ಕಟ್ಟಿಮನಿ ಅಮಾನತ್

ಸಹಪ್ರಾಧ್ಯಾಪಕನ ಮೇಲೆ ಹಲ್ಲೆ: ಕೃಷಿ ವಿಶ್ವವಿದ್ಯಾಲಯ ಶಿಕ್ಷಣ ಸಹಾಯಕ ಆಡಳಿತಾಧಿಕಾರಿ ಸಿದ್ದರಾಮ ಕಟ್ಟಿಮನಿ ಅಮಾನತ್

ರಾಯಚೂರು, ಜು.೨೨- ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಗಂಗಾವತಿ ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಡಿ.ಕೆ.ಹಾದಿಮನಿ ಇವರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಕೃಷಿವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರಿ ಸಿದ್ದರಾಮ ಕಟ್ಟಿಮನಿ ಎಂಬುವರನ್ನು ಸೇವೆಯಿಂದ ಅಮಾನತ್‌ಗೊಳಿಸಿ ಕುಲಸಚಿವರು ಆದೇಶಿಸಿದ್ದಾರೆ.ಕೆಲಸ ನಿಮಿತ್ಯ ಗಂಗಾವತಿಯಿAದ ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದ ಸಹ ಪ್ರಾಧ್ಯಾಪಕ ಡಾ.ಡಿ.ಕೆ.ಹಾದಿಮನಿಯವ ಮೇಲೆ ಕೃಷಿವಿಶ್ವವಿದ್ಯಾಲಯದ ಆವರಣದಲ್ಲಿ ಸಹ ಆಡಳಿತಾಧಿಕಾರಿಯಾಗಿರು ಸಿದ್ದರಾಮ ಕಟ್ಟಿಮನಿ, ಹಾಗೂ ಇವರ ಪತ್ನಿ ಹಾಗೂ ಪತ್ನಿಯ ತಂಗಿ ವಿಜಯಲಕ್ಷಿö್ಮÃಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಕುರಿತು ಜು.೧೯ ರಂದು ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿ ದುವರ್ತನೆ ಪ್ರದರ್ಶಿಸಿರುವ ಆರೋಪದ ಮೇಲೆ ಸೇವೆಯಿಂದ ಅಮಾನತ್‌ಗೊಳಿಸಿ ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಲಾಗಿದೆ.

RELATED ARTICLES
- Advertisment -
Google search engine

Most Popular

Recent Comments