ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳವರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀರಾಯರ ಪೂರ್ವಾರಾಧನೆಯ ಸಂದರ್ಭದಲ್ಲಿ ಶ್ರೀರಂಗಂ ದೇವಸ್ಥಾನದ ಅಧಿಕಾರಿಗಳು ಪವಿತ್ರ ಶ್ರೀರಂಗನಾಥ ಸ್ವಾಮಿಯ ಶೇಷವಸ್ತ್ರವನ್ನು ತಂದು ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ ಸಾಂಪ್ರದಾಯಿಕವಾಗಿ ಸಮರ್ಪಿಸಿದರು.ಶ್ರೀಪಾದಂಗಳವರು ಭಕ್ತಿಭಾವದಿಂದ ಶ್ರೀರಂಗನಾಥ ಸ್ವಾಮಿಯ ಪವಿತ್ರ ಶೇಷವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿಗಳವರ ಸನ್ನಿಧಿಗೆ ಸಮರ್ಪಿಸಿದರು.ನಂತರ ಶ್ರೀರಂಗಂ ದೇವಸ್ಥಾನದ ಅಧಿಕಾರಿಗಳು ಶ್ರೀಪಾದಂಗಳವರಿಗೆ ಪ್ರಸಾದ ಹಾಗೂ ವಸ್ತ್ರವನ್ನು ಸಮರ್ಪಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ದೇವಸ್ಥಾನದ ಅಧಿಕಾರಿಗಳನ್ನು ಆಶೀರ್ವದಿಸಿದರು.






Recent Comments