Wednesday, July 29, 2026
Google search engine
Homeಕೃಷಿ / ಬಜಾರ್ವಿಕಸಿತ ಭಾರತ – ಜಿ ರಾಮ್ ಜಿ 125 ದಿನಗಳ ಗ್ರಾಮೀಣ ಉದ್ಯೋಗದ ಖಾತ್ರಿ ಹೊಸ...

ವಿಕಸಿತ ಭಾರತ – ಜಿ ರಾಮ್ ಜಿ 125 ದಿನಗಳ ಗ್ರಾಮೀಣ ಉದ್ಯೋಗದ ಖಾತ್ರಿ ಹೊಸ ಖಾತ್ರಿ ಗ್ರಾಮೀಣಾವೃದ್ಧಿಯ ಹೊಸ ಸಂಕಲ್ಪ ಉದ್ಯೋಗದ ಹೊಸ ಖಾತ್ರಿ – ಸಿಇಒ ಈಶ್ವರ್ ಕಾಂದೂ

ರಾಯಚೂರು: ಜು.23 ಗ್ರಾಮೀಣಾಭಿವೃದ್ಧಿ ಸಚಿವಾಲಯ ಭಾರತ ಸರ್ಕಾರ ಹಾಗೂ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ನಿರ್ದೇಶನದಂತೆ ವಿಕಸಿತ ಭಾರತ – ಜಿ ರಾಮ್ ಜಿ125 ದಿನಗಳ ಗ್ರಾಮೀಣ ಉದ್ಯೋಗದ ಖಾತ್ರಿ ಹೊಸ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ಒದಗಿಸಿ ವಲಸೆ ತಡೆಯುವ ಮತ್ತು ಉದ್ಯೋಗ ಖಾತರಿಯನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತದೆಡೆಗೆ ವಿಶೇಷ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಪ್ರಕಟಣೆಯಲ್ಲಿ ತಿಳಿಸಿದರು.ಇನ್ನೂ ರಾಯಚೂರು ಜಿಲ್ಲೆಯಲ್ಲಿ ತಲೆದೋರಿರುವ ಬರದಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ವಿಕಸಿತ ಭಾರತ – ಜಿ ರಾಮ್ ಜಿ125 ದಿನಗಳ ಗ್ರಾಮೀಣ ಉದ್ಯೋಗದ ಖಾತ್ರಿ ಹೊಸ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಅಕುಶಲ ಕೆಲಸ ಒದಗಿಸಲಾಗುತ್ತಿದೆ. ಆದರೂ ಕೆಲವೆಡೆ ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿರುವುದನ್ನು ತಡೆಯಲು ಹೆಚ್ಚಿನ ಜನರಿಗೆ ಸ್ಥಳೀಯವಾಗಿ ನಿರಂತರ ಕೆಲಸ ಒದಗಿಸುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೆ ನಿರಂತರ ಉದ್ಯೋಗ ಒದಗಿಸಿ ಜೀವನ ಸಂಕಷ್ಟ ನೀಗಿಸುವ ಉದ್ದೇಶದಿಂದ ಜುಲೈ 1 ರಿಂದ ವಿಕಸಿತ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತದೆಡೆಗೆ ಕಾರ್ಯಕ್ರಮಗಳನ್ನು ರಾಯಚೂರು ಜಿ.ಪಂ ವಿನೂತನ ಐಇಸಿ ಚಟುವಟಿಕೆಗಳ ಮೂಲಕ ಅಭಿಯಾನವನ್ನು 179 ಗ್ರಾ.ಪಂ ಗಳಲ್ಲಿ ಕೈಗೊಳ್ಳಲಾಗುತ್ತಿದೆ. • 125 ದಿನಗಳ ಖಾತರಿಪಡಿಸಿದ ಉದ್ಯೋಗ• ಗಂಡು ಮತ್ತು ಹೆಣ್ಣಿಗೆ ಸಮಾನ ಅವಕಾಶ-ಸಮಾನ ಕೂಲಿ ಪ್ರತಿ ದಿನಕ್ಕೆ ರೂ.382/-• ಗ್ರಾಮ ಸಭೆಯ ಮೂಲಕ ವಿಕಸಿತ ಗ್ರಾಮ ಪಂಚಾಯತ್ ಯೋಜನೆ• ನಿರುದ್ಯೋಗ ಭತ್ಯೆಗಾಗಿ ಬಲಿಷ್ಠ ನಿಯಮಗಳು• ಸಕಾಲಿಕ ಕೂಲಿ ಪಾವತಿ ಮತ್ತು ವಿಳಂಬ ಪರಿಹಾರ• ಗ್ರಾಮ ಸಭೆಯಿಂದ ವಿಕಸಿತ ಗ್ರಾಮ ಪಂಚಾಯತ್ ಯೋಜನೆ• ವಿಕಸಿತ ಗ್ರಾಮ ಪಂಚಾಯತಿಯಿಂದ ವಿಕಸಿತ ಭಾರತದೆಡೆಗೆ• ತಂತ್ರಜ್ಙಾನದ ಮೂಲಕ ಸಬಲೀಕರಣ• ವಿ.ಜಿ.ಪಿ.ಪಿ ಯಲ್ಲಿ ವಿವಿಧ ಯೊಜನೆಗಳ ಒಗ್ಗೂಡಿಸುವಿಕೆ*ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ತಂತ್ರಜ್ಞಾನದ ಬಳಕೆ* * • ಬಯೋಮೆಟ್ರಿಕ್ ದೃಢೀಕರಣ• ಮೊಬೈಲ್ ಆಧಾರಿತ ಮೇಲ್ವಿಚಾರಣೆ• ಜಿಯೋ-ಸ್ಪೇಷಿಯಲ್ ತಂತ್ರಜ್ಞಾನ ಆಧಾರಿತ ಯೋಜನೆ• ರಿಯಲ್-ಟೈಮ್ ಡ್ಯಾಶ್ ಬೋರ್ಡ್• ಎಐ ಆಧಾರಿತ ವಿಶ್ಲೇಷಣೆ• ನಾಗರಿಕ ಸಹಭಾಗಿತ್ವದ ವೇದಿಕೆ*ಗ್ರಾಮೀಣ ಆರ್ಥಿಕತೆಯ ಸಬಲೀಕರಣಕ್ಕೆ ಒತ್ತು* • ಜಲಸಂರಕ್ಷಣೆ ಹಾಗೂ ಜಲ ಸಂಬಂಧಿತ ಕಾಮಗಾರಿಗಳಿಗೆ ಉತ್ತೇಜನ• ಜೀವನೋಪಾಯದ ಅವಕಾಶಗಳ ವಿಸ್ತರಣೆ• ಗ್ರಾಮೀಣ ಮೂಲಸೌಕರ್ಯಗಳ ಬಲವರ್ಧನೆ• ಅನೂಕೂಲಕರ ಸಾಮಾರ್ಥ್ಯದ ವಿಕಸನ*ಈ ಪ್ರಮುಖ ಕಾರ್ಯಗಳಿಗೆ ವಿಶೇಷ ಆದ್ಯತೆ* • ಜಲಸಂರಕ್ಷಣೆ• ಅಂತರ್ಜಲ ಮರುಪೂರಣ• ಜಲಾನಯನ ಪ್ರದೇಶದ ಅಭಿವೃದ್ಧಿ• ನೀರಾವರಿ• ಜಲಮೂಲಗಳ ಪುನಶ್ಚೇತನ• ಅರಣ್ಯೀಕರಣ*ಪ್ರತಿಕೂಲ ಹವಾಮಾನ ಘಟನೆಗಳಿಂದ ರಕ್ಷಣೆಯ ಸಿದ್ಧತೆ* • ಆಶ್ರಯ ಕೇಂದ್ರಗಳು• ತಟಬಂಧ/ನದಿ ಏರಿಗಳು• ಪ್ರವಾಹ ನಿರ್ವಹಣಾ ಮೂಲಸೌಕರ್ಯಗಳು• ಪುನರ್ವಸತಿ ಕಾರ್ಯಗಳು• ಕಾಡ್ಗಿಚ್ಚು ನಿರ್ವಹಣೆ

RELATED ARTICLES
- Advertisment -
Google search engine

Most Popular

Recent Comments