ರಾಯಚೂರು, ಜು೪- ರಾಜ್ಯದಲ್ಲಿ ಬರದ ಛಾಯೆಇದ್ದು ಇನ್ನೊಂದು ವಾರದಲ್ಲಿ ಮಳೆಯಾಗುವ ನಿರೀಕ್ಷೆಯಿದೆ.ಸರಕಾರ ಪರ್ಯಾಯ ಸಿದ್ದತೆಯಲ್ಲಿ ತೊಡಗಿದೆ ಎಂದು ಮೇಲುಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹೇಳಿದರು. ಶುಕ್ರವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದು ಮಾಧ್ಯಮ ಗಳೊಂದಿಗೆ ಮಾತನಾಡಿದರು.ಜಲಾಶಯಗಳು ಖಾಲಿಯಾಗಿವೆ. ತುಂಗಭದ್ರ ಜಲಾಶಯ ದಲ್ಲಿ ೯ ಟಿಎಂಸಿ ಮಾತ್ರನೀರಿನ ಸಂಗ್ರಹವಿದೆ. ಒಂದುವರೆ ಟಿಎಂಸಿ ನೀರು ಕುಡಿಯಲು ಬಳಸಲು ನಿರ್ದರಿಸಲಾಗಿದೆ. ಮಳೆ ಅಭಾವದಿಂದ ಬರ ಪರಸ್ಥಿತಿ ಇದೆಯಾದರೂ ಇನ್ನೂ ತೊಗರಿ, ಸೂರ್ಯಕಾಂತಿ ಸೇರಿ ಇತರೆ ಬೆಳೆಯುವ ಅವಕಾಶವಿದೆ.ರೈತರು ಫಸಲ್ ಭೀಮಾಯೋಜನೆ ವಿಮೆಪಡೆಯಬೇಕು. ಈಗಾಗಲೇ ಬಿತ್ತನೆ ಮಾಡಿ ನಷ್ಟದ ಆತಂಕದಲ್ಲಿರುವ ರೈತರ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಪೂವ ೯ ಸಿದ್ದತೆ ಮಾಡಿಕೊಳ್ಳಲಾಗಿದೆ.ಈಗಲೆ ಬರ ಘೋಷಣೆ ಸಾಧ್ಯವಾಗುವದಿಲ್ಲ. ಪರಸ್ಥಿತಿ ಎದುರಿಸಲು ಸಿಎಂ ಸೂಚನೆ ಮೇರೆಗೆ ಸಭೆ ನಡೆಸಿಮಾಹಿತಿ ಪಡೆಯಲಾಗಿದೆ.ಮುಂಬರುವ ದಿನಗಳಲ್ಲಿ ಎದುರಾಗಯವ ಕುಡಿಯುವ ನೀರು, ಉದ್ಯೋಗ ಬರ ಕಾಮಗಾರಿಗಳ ಕುರಿತು ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.





Recent Comments