ರಾಯಚೂರು,ಜು.,೮- ಮಾನವಿ ತಾಲೂಕಿನ ರಾಜೋಳಿಬಂಡಾ ಯೋಜನೆ ಬಳಿ ರಾಜ್ಯದ ದ ಸಣ್ಣ ನೀರಾವರಿ ಇಲಾಖೆಯಿಂದ ಕೈಗತ್ತಿಕೊಂಡಿಯುವ ನೀರಿನ ಕಾಮಗಾರಿ ವಿರೋಧಿಸಿ ತೆಲಂಗಾಣ ಬಿಆರ್ ಎಸ್ ಪಕ್ಷದ ಮುಖಂಡರು, ರೈತರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು.ಮಾಜಿ ಸಚಿವ ಲಕ್ಷ್ಮೀರೆಡ್ಡಿ ನೇತೃತ್ವದಲ್ಲಿ ಆಗಮಿಸಿದ ಬಿಆರ್ ಎಸ್ ನಾಯಕರು ಕರ್ನಾಟಕ ಸರಕಾರ ಚಿಕಲಪರ್ವಿ ಬಳಿ ಜಲಾಶಯ ನಿರ್ಮಿಸುವ ಮೂಲಕ ತೆಲಂಗಾಣ ೪೦ ಕ್ಕೂ ಹೆಚ್ಚು ಗ್ರಾಮ ಕುಡಿಯುವ ನೀರು,ಕೃಷಿ ಗೆ ನೀರಿನ ಸಮಸ್ಯೆ ಎದುರಾಗಲಿದೆ. ರಾಜ್ಯ ಸರಕಾರ ಕೂಡಲೇ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಘೋಷಣೆ ಹಾಕಿದರು. ನೂರಾರು ಜನರು ಸೇರಿದ್ದರಿಂದ ಬಿಗು ವಾತಾವರಣ ತಲೆದೋರಿತ್ತು. ಮಾನವಿ ತಹಸೀಲ್ದಾರ, ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದರು. ತೆಲಂಗಾಣ ಕಾಂಗ್ರೆಸದ ಸರಕಾರ,ಸಿಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಜನರು,ಮಾಜಿ ಶಾಸಕರುಗಳು ಸ್ಥಳದಲ್ಲಿದ್ದರು.






Recent Comments