ರಾಯಚೂರು,ಜೂ.೨೩-ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಉದ್ದೇಶ ಯಾವುದೇ ಮತದಾರನ ಹಕ್ಕು ಕಸಿಯುವ ಕೆಲಸವಲ್ಲ .ಇದು ಭಾರತ ಚುನಾವಣಾ ಆಯೋಗದಿಂದ ಕಾಲಕಾಲಕ್ಕೆ ನಡೆಸಲಾಗುವ ಭಾರತ ಮತದಾರರ ನೈಜ ಲಭ್ಯತೆ ಹಾಗೂ ನೈಜತೆಯ ಪರಿಷ್ಕರಣೆ ಉತ್ತಮ ಮತದಾರ ಪಟ್ಟಿಯನ್ನು ತಯಾರಿಸುವುದೇ ಎಸ್.ಐ.ಆರ್ ಕಾರ್ಯಕ್ರಮ ಎಂದು ರಾಯಚೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಹೇಳಿದರು.ಅವರಿಂದು ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಮತದಾರರ ಮಾಹಿತಿ ಅನುಕೂಲತೆಗಳು ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೇಂದ್ರದ ಪ್ರಾರಂಭಿಸಿ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು. ಮತದಾನ ವ್ಯವಸ್ಥೆಯನ್ನು ಬಲಗೊಳಿಸಲು ಅರ್ಹರ ಪಟ್ಟಿ ಯ ಅವಶ್ಯಕತೆಯಿದೆ.ಎಲ್ಲರು ಅಗತ್ಯ ದಾಖಲೆನೀಡಿ ಶುದ್ದ ಮತದಾರರ ಪಟ್ಟಿ ಸಿದ್ಧಪಡಿಸಲು ಸಹಕರಿಸಬೇಕು ಎಂದರು. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿ ಹಾಲಸಿದ್ದಪ್ಪ ಪೂಜಾರಿ ಮಾತನಾಡಿ ಈಗಾಗಲೇ ಜಿಲ್ಲೆಯಲ್ಲಿ ಬಿ ಎಲ್ ಓ ಅವರು ಮ್ಯಾಪಿಂಗ್ ಕಾರ್ಯವನ್ನು ನಡೆಸಿದ್ದಾರೆ ಮತದಾರರ ಪಟ್ಟಿಯಲ್ಲಿ ಅಹರ ಮತದಾರರನ್ನು ಕಡ್ಡಾಯವಾಗಿ ಸೇರಿಸಬೇಕು .ಅನರ್ಹ ಮತದಾರರನ್ನು ಯಾವುದೇ ಕಾರಣಕ್ಕೂ ಮತದಾರ ಪಟ್ಟಿಯಲ್ಲಿ ಸೇರಿಸಬಾರದು. ಮತ್ತು ಉಳಿಸಬಾರದು.ಮತದಾರರಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಿಯ ಕಾರ್ಯ ನಡೆದಿದೆ. ತಂತ್ರಜ್ಞಾನ ಆಧಾರಿತ ನಿಖರತೆ ಇವುಗಳನ್ನ ಬಳಸಿ ಈ ಕಾರ್ಯಮಾಡಲಾಗುತ್ತದೆ .ಮತದಾರರ ಪಟ್ಟಿಯ ಶುದ್ಧೀಕರಣ ಮತದಾರನ ಹಕ್ಕಿನ ರಕ್ಷಣೆ ಕಾರ್ಯವಾಗಿದೆ ಎಂದು ಹೇಳಿದರು .ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ . ಮತದಾರ ಸಾಕ್ಷರತಾ ಕ್ಲಬ್ ಕ್ಲಬ್ ವಿಭಾಗದ ನೋಡಲ್ ಅಧಿಕಾರಿ ಡಾ. ದಂಡಪ್ಪ ಬಿರಾದಾರ್ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಈರೇಶ್ ನಾಯಕ್ .ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಂಗಸ್ವಾಮಿ ,ವಿಶ್ವವಿದ್ಯಾಲಯ ಡಾ. ರಾಜಣ್ಣ ರಾಯಚೂರು ಆದಿ ಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಎಸ್ ಬಿರಾದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶರಣಮ್ಮ ,ವಿಶೇಷ ಚೇತನದ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಸ್ವತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸೋಮಶೇಖರ್ ವಕ್ರಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





Recent Comments