ರಾಯಚೂರು,ಸೆ.೯-ಶ್ರೀ ಮಂತ್ರಾಲಯಮಠದಲ್ಲಿ ಶ್ರೀ ಲಕ್ಷ್ಮೀ ಶೋಭನ ಪಾರಾಯಣ, ಕುಂಕುಮಾರ್ಚನೆಮಂತ್ರಾಲಯ, ಸೆ.9: ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ 13ನೇ ಚಾತುರ್ಮಾಸ್ಯ ದೀಕ್ಷೆಯ ಶುಭ ಸಂದರ್ಭದಲ್ಲಿ ಬುಧವಾರ ಶ್ರೀಮಠದಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮೀ ಶೋಭನ ಪಾರಾಯಣ ಹಾಗೂ ಶ್ರೀ ಲಕ್ಷ್ಮೀ ದೇವಿಗೆ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಯೋಜನೆಯಡಿ ವಿವಿಧ ಭಜನಾ ಮಂಡಳಿಗಳ 2 ಸಾವಿರಕ್ಕೂ ಅಧಿಕ ಸದಸ್ಯರು ಈ ಆಧ್ಯಾತ್ಮಿಕ ಪಾರಾಯಣದಲ್ಲಿ ಪಾಲ್ಗೊಂಡಿದ್ದರು.ಬೆಳಿಗ್ಗೆ ಆರಂಭವಾದ ಶ್ರೀ ಲಕ್ಷ್ಮೀ ಶೋಭನ ಪಾರಾಯಣ ಕಾರ್ಯಕ್ರಮವು ದಿನವಿಡೀ ಭಕ್ತಿಪೂರ್ವಕವಾಗಿ ನಡೆಯಿತು. ಸಂಜೆ ಪರಮಪೂಜ್ಯ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಸಂದೇಶದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.ಕಾರ್ಯಕ್ರಮದ ನಂತರ ಶ್ರೀ ಸ್ವಾಮೀಜಿಯವರು ಭಾಗವಹಿಸಿದ್ದ ಎಲ್ಲಾ ಭಕ್ತರಿಗೆ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ಶ್ರೀ ಲಕ್ಷ್ಮೀ ದೇವಿಯ ದಿವ್ಯ ಕೃಪೆ ಸದಾ ಭಕ್ತರ ಮೇಲಿರಲಿ ಎಂದು ಪ್ರಾರ್ಥಿಸಿ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಗಳ ಸದಸ್ಯರು, ಭಕ್ತರು ಹಾಗೂ ಶ್ರೀಮಠದ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.





Recent Comments