ರಾಯಚೂರು ಅ 29:- ಜಿಲ್ಲೆಯ ವೈಶಿಷ್ಟ್ಯ, ಇಲ್ಲಿಯ ಜನ ಜೀವನ ವಿಶೇಷತೆ, ನಮ್ಮ ಇತಿಹಾಸ, ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಕೃತಿ ಬಿತ್ತರಿಸುವ ಮಾಧ್ಯಮ ಕ್ಷೇತ್ರದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ನವೋದಯ 88.4 ಎಫ್ ಎಂ ಮಹತ್ತರ ಹೆಜ್ಜೆಯಾಗಿದೆ ಎಂದು ಲೋಕಸಭೆ ಸದಸ್ಯರಾದ ಜಿ ಕುಮಾರ್ ನಾಯಕ ಹೇಳಿದರು.ಅವರಿಂದ ನಗರದ ಪ್ರತಿಷ್ಠಿತ ನವೋದಯ ಶಿಕ್ಷಣ ಸಂಸ್ಥೆಯ ಆವರಣದ ಅಂತರಾಷ್ಟ್ರೀಯ ಕ್ರೀಡಾಂಗಣ ಪ್ರಾಂಗಣದಲ್ಲಿ ಖಾಸಗಿ ಕ್ಷೇತ್ರದ ಜಿಲ್ಲೆಯ ಮೊಟ್ಟಮೊದಲ ನವೋದಯ 88.4 ಎಫ್ ಎಂ ವಿಡಿಯೋ ಉದ್ಘಾಟಿಸಿ ಮಾತನಾಡಿದರು.ರಾಯಚೂರು ಜಿಲ್ಲೆ ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿದೆ.ಇಲ್ಲಿಯ ಬಹು ಸಂಸ್ಕೃತಿಯ ಇತಿಹಾಸ, ವೈವಿಧ್ಯಮಯ ಜೀವನ ಕೃಷಿ, ತಾಂತ್ರಿಕತೆ, ಶಿಕ್ಷಣ, ನಗರ ಮತ್ತು ಗ್ರಾಮೀಣ ಜನಜೀವನ ಅವರ ಬದುಕು ಸಾಂಸ್ಕೃತಿಕ ಚಟುವಟಿಕೆಗಳು ಸಂಗೀತ, ನವೋದಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಕ್ರೀಡೆ,ಸಾಹಿತ್ಯ, ಸಂಶೋಧನೆಗಳ ಬಗ್ಗೆ ಬೆಳಕು ಚೆಲ್ಲುವ ಮತ್ತು ಸಮಾಜಕ್ಕೆ ಮುಟ್ಟಿಸುವ ಅತ್ಯುತ್ತಮ ಸಾಧನಗಳಲ್ಲಿ ನವೋದಯ 88.4 ಹೊಸ ಮೈಲುಗಲ್ಲಾಗಲಿದೆ.ನಮ್ಮ ಜನರನ್ನು ಪರಿಚಯಿಸುವ ಮತ್ತು ಹೊಸ ವಿಷಯಗಳನ್ನು ನಮ್ಮ ಜನರಿಗೆ ಮುಟ್ಟಿಸುವ ವೃತ್ತಿಪರತೆಯೊಂದಿಗೆ ನವೋದಯ 88.4 ತನ್ನ ಉತ್ತಮ ಸಾಧನೆ ಮಾಡಲೆಂದು ಹಾರೈಸಿದವರು, ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್ ಆರ್ ರೆಡ್ಡಿ ಅವರು ಏನನ್ನಾದರೂ ಮಾಡಬೇಕೆಂಬ ಸಂಕಲ್ಪ ಮಾಡಿದರೆ, ಅದನ್ನು ಸಾಧಿಸದೆ ಬಿಡದವರು.27 ವರ್ಷಗಳ ಹಿಂದೆ ಅಂದರೆ 1999 ರಲ್ಲಿ ನಾನು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನನ್ನಷ್ಟೇ ವಯಸ್ಸಿನ ಎಸ್ ಆರ್ ರೆಡ್ಡಿ ಅವರು ನನ್ನ ಕೋಣೆಗೆ ಬಂದು, ವೈದ್ಯಕೀಯ ಕಾಲೇಜ್ ಮಾಡುವ ಉದ್ದೇಶಕ್ಕೆ ಕೃಷಿ ಜಮೀನು ಎನ್ ಎ ಕೇಳಿದ್ದರು. ಅಂದು ಅವರನ್ನು ಕಂಡು, ವೈದ್ಯಕೀಯ ಕಾಲೇಜ್ ಇವರಿಂದ ನಿರ್ಮಾಣ ಸಾಧ್ಯವೇ ಎಂಬ ಅನುಮಾನ ಮೂಡಿತು ಆದರೆ ಇಂದು ಈ ಕಾಲೇಜ್ ಆವರಣ ಮತ್ತು ಈ ಪರಿಸರವನ್ನು ನೋಡಿದಾಗ ಅವರ ಸಾಮರ್ಥ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಇನ್ನು ಹೆಚ್ಚಿನ ಸಾಧನೆ ಮಾಡಲು ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.ಉದ್ದೇಶದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಮಾಜಿ ಸಚಿವರಾದ ಎನ್ ಎಸ್ ಬೋಸರಾಜು ಅವರು ಮಾತನಾಡುತ್ತಾ, ನವೋದಯ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿಯೇ ಒಂದು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿದೆ.ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸಿ ಈ ಭಾಗಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ.ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್ಆರ್ ರೆಡ್ಡಿ ಅವರು ಯಾರ ಮಾತನ್ನು ಕೇಳುವುದಿಲ್ಲ ಅವರು ನಿರ್ಧರಿಸಿದ್ದನ್ನೆ ಮಾಡುತ್ತಾರೆ. ಅವರ ಈ ಕಠಿಣ ನಿರ್ಧಾರಗಳಿಂದ ಇಂದು ನವೋದಯ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ.ಈ ಸಂಸ್ಥೆಯಿಂದ ಜಿಲ್ಲೆಗೆ ಅನುಕೂಲವಾಗಲಿದೆ. ಎಸ್.ಆರ್ ರೆಡ್ಡಿ ಅವರು ಕಲ್ಯಾಣ ಮಂಟಪ ನಿರ್ಮಿಸಿ ಜನರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಕ್ರೀಡಾಂಗಣವನ್ನು ರಾಜ್ಯದ ಮುಖ್ಯಮಂತ್ರಿ ಅವರಿಂದ ಲೋಕಾರ್ಪಣೆ ಮಾಡಿಸು ಅವರ ಆಶಯಕ್ಕೆ ಸಂಪೂರ್ಣವಾಗಿ ಸಹಕರಿಸಿ ಮುಖ್ಯಮಂತ್ರಿಗಳನ್ನು ಕಾರ್ಯಕ್ರಮಕ್ಕೆ ಕಾರ್ಯಕರ್ತರ ಪ್ರಯತ್ನ ನಡೆದಿದೆ ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾ ನಿರ್ದೇಶಕ ಡಾ.ಅಮೃತ ರೆಡ್ಡಿ, ರಿಜಿಸ್ಟ್ರಾರ್ ಡಾ.ಟಿ ಶ್ರೀನಿವಾಸ್, ಸುರೇಶ್, ವಿಜಯಕುಮಾರ್, ದೊಡ್ಡಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.






Recent Comments