ರಾಯಚೂರು,ಆ.೨೭- ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಎನ್.ಶಿವಶಂಕರ ೭೪ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ದಿಎಂ.ಜಗದೀಶ ೨೨೬ ಮತ ಪಡೆದು ಪರಭಾವಗೊಂಡಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಅರ್.ಗೌಸಪಾಷಾ ಗೆಲವು ಸಾಧಿಸಿದ್ದಾರೆ. ಪ್ರತಿಸ್ಪರ್ದಿ ವೀರಗುಂಡಯ್ಯ ಸ್ವಾಮಿ ೧೯೧ ಮತಪಡೆದಿದ್ದಾರೆ. ೨೦೨ ಮತ ಗೌಸಪಾಷಾ ಪಡೆದಿದ್ದಾರೆ.ಮಹಿಳಾ ಉಪಾಧ್ಯಕ್ಷ ಸ್ಥಾನಕ್ಕೆ ಭಾರತಿ.ಜಿ ೪೨ ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಶಾಂತಕುಮಾರಿ ಇವರಿಗೆ ೩೧೭ ಮತ ಬಂದಿವೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ೩೫೪ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಜಂಟಿ ಕಾರ್ಯದರ್ಶಿಯಾಗಿ ಮುನಿಯಪ್ಪ ಅವಿರೋಧವಾಗಿ ಆಯ್ಮೆಯಾಗಿದ್ದಾರೆ.





Recent Comments