ರಾಯಚೂರು,ಜು.೪- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಕಾಮಗಾರಿಗಳನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ದದ್ದಲ್ ಬಸನಗೌಡ ವೀಕ್ಷಣೆ ನಡೆಸಿದರು.ತಾಲೂಕಿನ ಕುರ್ವಕುರ್ದಾ ಬ್ರಿಜ್ ಕಾಮಗಾರಿ, ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಚಂದ್ರಬಂಡ ಶಾಸಕರ ಭೇಟಿ ವೀಕ್ಷಣೆಮಾಡಿದರು. ಕಡಗಂದೊಡ್ಸಿಯಿಂದ ರಾಯಚೂರಿಗೆ ಶಾಲಾ ಮಕ್ಕಳಿಗೆ ಹೋಗಲು ಅನುಕೂಲವಾಗಲು ಶಾಸಕರಿಂದ ಬಸ್ಸ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಬದಲ್ಲಿ ತಹಸೀಲ್ದಾರ ಸುರೇಶ್ ವರ್ಮಾ, ಮುಖಂಡರು ಗಳಾದ ಬಸವರಾಜ ವಕೀಲ್, ಶಶಿಕಲಾ ಭೀಮರಾಯ, ನಾಗೇಂದ್ರ ಪ್ಪ ಮಟಮಾರಿ ಸೇರಿದಂತೆ ಅನೇಕ ಮುಖಂಡರು,ಇಲಾಖೆ ಅಧಿಕಾರಿಗಳು ಇದ್ದರು.





Recent Comments