Wednesday, July 29, 2026
Google search engine
Homeಮುಖ್ಯಾಂಶಗಳುಎಸ್ಐಆರ್ ಕುರಿತು ಜಿಲ್ಲಾಡಳಿತದಿಂದ ಸೈಕಲ್‌ಜಾಥಾ: ಡಿಸಿ ಪೂವಿತಾ ಚಾಲನೆ

ಎಸ್ಐಆರ್ ಕುರಿತು ಜಿಲ್ಲಾಡಳಿತದಿಂದ ಸೈಕಲ್‌ಜಾಥಾ: ಡಿಸಿ ಪೂವಿತಾ ಚಾಲನೆ

ರಾಯಚೂರು,ಜು.೯-ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮತದಾರರು ಭಾಗವಹಿಸುವಂತೆ ಜನ ಜಾಗೃತಿಗಾಗಿ ಸೈಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಪೂವಿತಾ‌.ಎಸ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಜಿಲ್ಲಾಡಳಿತ. ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ರಾಯಚೂರು ವತಿಯಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಘನತ್ಯಾಜ್ಯ ನಿರ್ವಹಣೆ ಹೊಸ ನಿಯಮಗಳ ಜಾಗೃತಿಗಾಗಿ ಸದೃಢ ದೇಹ. ಸ್ವಚ್ಛ ಸಮಾಜ. ಬಲಿಷ್ಠ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಓಟ. ಮ್ಯಾರಥಾನ್- ಸೈಕ್ಲೋಥಾನ್ ನಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾದರು. ಜಿಲ್ಲಾ ಕ್ರೀಡಾಂಗಣದಿಂದ ಗಂಜ್ ವೃತ್ತದವರೆಗೆ ನಡೆಯಿತು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದು, ಮಹಾನಗರ ಪಾಲಿಕೆ ಆಯುಕ್ತ ಜೋಬಿನ್ ಮಹೋಪಾತ್ರ, ಸರಕಾರಿ ನೌಕರ ಸಂಘದ ಅಧ್ಯಕ್ಷ ಕೃಷ್ಣ ಶಾಂವತಗೇರಿ ಸೇರಿ ವಿವಿಧ ಇಲಾಖೆ ಸಿಬ್ಬಂದಿಗಳು, ಯುವಕರು ಭಾಗಿಯಾದರು.

RELATED ARTICLES
- Advertisment -
Google search engine

Most Popular

Recent Comments