Sunday, August 16, 2026
Google search engine
Homeರಾಯಚೂರುರಾಯಚೂರು ನಗರಆಗಸ್ಟ್‌ 8ರೊಳಗೆ ಎನ್ಯೂಮರೇಷನ್‌ ಫಾರ್ಮ್‌ ಸಲ್ಲಿಸಲು ಜಿಲ್ಲಾಧಿಕಾರಿ ಪೂವಿತಾ

ಆಗಸ್ಟ್‌ 8ರೊಳಗೆ ಎನ್ಯೂಮರೇಷನ್‌ ಫಾರ್ಮ್‌ ಸಲ್ಲಿಸಲು ಜಿಲ್ಲಾಧಿಕಾರಿ ಪೂವಿತಾ

ರಾಯಚೂರು, ಜುಲೈ 30: ವಿಶೇಷ ತೀವ್ರ ಪರಿಷ್ಕರಣೆ (SIR-) ಕಾರ್ಯಕ್ರಮದಡಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಎನ್ಯೂಮರೇಷನ್‌ ಫಾರ್ಮ್‌ (EF) ಸಲ್ಲಿಸದ ಮತದಾರರು ಆಗಸ್ಟ್‌ 8ರೊಳಗೆ ತಮ್ಮ ಫಾರ್ಮ್‌ಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಪೂವಿತಾ ಹೇಳಿದರು. ಅವರಿಂದು‌ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್ಓ) ಮನೆಮನೆಗೆ ಭೇಟಿ ನೀಡಿ ಫಾರ್ಮ್‌ಗಳನ್ನು ವಿತರಿಸುತ್ತಿದ್ದಾರೆ. ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 17,14,559 ಇದ್ದು, ಇದರಲ್ಲಿ 15,84,491 ಮತದಾರರಿಂದ ಎನ್ಯೂಮರೇಷನ್‌ ಫಾರ್ಮ್‌ಗಳು ಸಂಗ್ರಹವಾಗಿವೆ. ಇನ್ನೂ 1,30,068 ಮತದಾರರು ಫಾರ್ಮ್‌ಗಳನ್ನು ಸಲ್ಲಿಸಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್-2026) ಕಾರ್ಯ ನಡೆಯುತ್ತಿದ್ದು, ಮತದಾರರ ಪಟ್ಟಿಯನ್ನು ಶುದ್ಧ, ನಿಖರ ಹಾಗೂ ಸಮಗ್ರವಾಗಿಸಲು ಈ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ಬೂತ್‌ ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.ಮತದಾರರು ತಮ್ಮ ಗುರುತಿನ ದಾಖಲೆಗಳು, ಜನ್ಮ ದಿನಾಂಕದ ದಾಖಲೆಗಳು ಹಾಗೂ ಇತರೆ ಅಗತ್ಯ ದಾಖಲೆಗಳೊಂದಿಗೆ ಬಿಎಲ್ಓಗಳನ್ನು ಸಂಪರ್ಕಿಸಿ ಫಾರ್ಮ್‌ಗಳನ್ನು ಸಲ್ಲಿಸಬಹುದು. ಮತದಾರರು ಸ್ವತಃ ಹಾಜರಾಗಿ ಅಥವಾ ಕುಟುಂಬ ಸದಸ್ಯರ ಮೂಲಕವೂ ಫಾರ್ಮ್‌ಗಳನ್ನು ಸಲ್ಲಿಸಲು ಅವಕಾಶವಿದೆ.ಎನ್ಯೂಮರೇಷನ್‌ ಫಾರ್ಮ್‌ಗಳನ್ನು ಆಗಸ್ಟ್‌ 8, 2026ರೊಳಗೆ ಸಲ್ಲಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲೆಯಲ್ಲಿ ಇಆರ್ಓ,ಇಆರ್ಓ ಮತ್ತು BLO ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಬೂತ್‌ ಮಟ್ಟದ ಏಜೆಂಟರು ಸಹ ಈ ಕಾರ್ಯದಲ್ಲಿ ಸಹಕರಿಸುತ್ತಿದ್ದು, ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಬದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ,ಎಡಿಸಿ ಶಿವಾನಂದ ಬಜಂತ್ರಿ ಇದ್ದರು.

RELATED ARTICLES
- Advertisment -
Google search engine

Most Popular

Recent Comments