Wednesday, April 15, 2026
Google search engine
Homeರಾಜ್ಯ71 ದಿನದಲ್ಲಿ 1,079 ಪ್ರಕರಣ ವಿಲೇವಾರಿ, 2 ಲಕ್ಷ 28 ಸಾವಿರ ದಂಡ, 34 ಸಾವಿರ...

71 ದಿನದಲ್ಲಿ 1,079 ಪ್ರಕರಣ ವಿಲೇವಾರಿ, 2 ಲಕ್ಷ 28 ಸಾವಿರ ದಂಡ, 34 ಸಾವಿರ ಪರಿಹಾರ- ಬಿ.ವೆಂಕಟ ಸಿಂಗ್

ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದಲ್ಲಿ ಕಳೆದ ಐದು ತಿಂಗಳಲ್ಲಿ 71 ದಿನ ಕಲಾಪ ನಡೆಸಿ 1,079 ಪ್ರಕರಣಗಳು ವಿಲೇವಾರಿ ಮಾಡಿದೆ ಎಂದು ಕರ್ನಾಟಕ ಮಾಹಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಬಿ.ವೆಂಕಟ ಸಿಂಗ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು 24 ನೇಯ ನವಂಬರ್-2025 ರಿಂದ ಮಾರ್ಚ ಅಂತ್ಯಕ್ಕೆ 2,520 ಪ್ರಕರಣಗಳು ವಿಚಾರಣೆಗೆ ಕೈಗೆತ್ತಿಕೊಂಡು 1,079 ಪ್ರಕರಣಗಳು ವಿಲೇವಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

ಅರ್ಜಿದಾರರಿಗೆ ಮಾಹಿತಿ ನೀಡಲು ಕಾಲ ಹರಣ ಮಾಡಿ ಸಮಯ ಮತ್ತು ಆರ್ಥಿಕ ನಷ್ಟ ಉಂಟು ಮಾಡಿದ ಕಾರಣ ನೊಂದ ಅರ್ಜಿದಾರರಿಗೆ 34 ಸಾವಿರ ಪರಿಹಾರ ನೀಡಲು ಆದೇಶ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಶೇಷವಾಗಿ 71 ದಿನದಲ್ಲಿ ಕಳೆದ ಒಂದು ದಶಕದಿಂದ ವಿಲೇವಾರಿಗೆ ಬಾಕಿ ಇದ್ದ ಹಳೇ ಪ್ರಕರಣಗಳನ್ನು ಆದ್ಯತೆ ಮೇಲೆ ಎಲೇ ಮಾಡಿರುವುದಾಗಿ ತಿಳಿಸಿರುವ ಅವರು ಬರುವ ದಿನಗಳಲ್ಲಿ ಹೊಸ ಪ್ರಕರಣಗಳು ಕೈಗೆತ್ತಿಕೊಂಡು ವಿಚಾರಣೆ ಶೀಘ್ರವಾಗಿ ಮುಗಿಸಿ ಅರ್ಜಿದಾರರಿಗೆ ಮಾಹಿತಿ ಕೊಡಿಸಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments