Thursday, June 4, 2026
Google search engine
Homeರಾಯಚೂರುರಸ್ತೆ ಅಪಘಾತ: ಯುವಕ ಸ್ಥಳದಲ್ಲಿಯೇ ಸಾವು

ರಸ್ತೆ ಅಪಘಾತ: ಯುವಕ ಸ್ಥಳದಲ್ಲಿಯೇ ಸಾವು

ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸುಮಾರು 8:45ರಿಂದ 9:00 ಗಂಟೆಯೊಳಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮೃತ ಯುವಕನನ್ನು ಆಕಾಶ್ (22), ತಂದೆ ಧನರಾಜ್, ಜನತಾ ಕಾಲೋನಿ, ಆಶಾಪುರ ರಸ್ತೆ ನಿವಾಸಿ ಎಂದು ಗುರುತಿಸಲಾಗಿದೆ. ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದ ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿವೆ.

ಅಪಘಾತದ ತೀವ್ರತೆಗೆ ಗಾಯಗೊಂಡ ಆಕಾಶ್ ರಕ್ತಸ್ರಾವದಿಂದ ಗಂಭೀರ ಸ್ಥಿತಿಗೆ ತಲುಪಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಅಪಘಾತದ ದೃಶ್ಯ ಭೀಕರವಾಗಿದ್ದು, ಬೈಕ್ ರಸ್ತೆ ಮಧ್ಯೆ ಬಿದ್ದಿದ್ದು, ಘಟನೆ ಸ್ಥಳದಲ್ಲಿ ಆತ ರಕ್ತದ ಮಡುಗಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.

ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವೇಗದ ಚಾಲನೆ ಅಥವಾ ರಸ್ತೆ ಪರಿಸ್ಥಿತಿ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಈ ಕುರಿತು ಸಂಬಂಧಿಸಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments