Friday, June 5, 2026
Google search engine
Homeರಾಯಚೂರುಹೆಲಿಪ್ಯಾಡ್ ಗೊಂದಲ: ಕಿಚ್ಚ ಸುದೀಪ್ ಹೆಲಿಕ್ಯಾಪ್ಟರ್ ಎರಡು ಬಾರಿ ಲ್ಯಾಂಡಿಂಗ್

ಹೆಲಿಪ್ಯಾಡ್ ಗೊಂದಲ: ಕಿಚ್ಚ ಸುದೀಪ್ ಹೆಲಿಕ್ಯಾಪ್ಟರ್ ಎರಡು ಬಾರಿ ಲ್ಯಾಂಡಿಂಗ್

ಸಿಂಧನೂರು: ನಗರದಲ್ಲಿ ನಡೆದ ಬಸನಗೌಡ ಫೌಂಡೇಷನ್ ಆಯೋಜಿಸಿದ್ದ ಸಾಮೂಹಿಕ ವಿವಾಹ ಹಾಗೂ 5001 ಮಾತೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರನ್ನು ಕರೆತಂದ ಹೆಲಿಕ್ಯಾಪ್ಟರ್ ನಿಗದಿತ ಹೆಲಿಪ್ಯಾಡ್ ಬಿಟ್ಟು ಬೇರೆ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆದ ಘಟನೆ ಕುತೂಹಲ ಮೂಡಿಸಿತು.
ಆದರೆ ತಕ್ಷಣವೇ ಪರಿಸ್ಥಿತಿಯನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಪೈಲಟ್‌ಗೆ ಸೂಚನೆ ನೀಡಿದ್ದು, ಹೆಲಿಕ್ಯಾಪ್ಟರ್ ಅನ್ನು ಮತ್ತೆ ಮೇಲಕ್ಕೇರಿಸಿ ನಿಗದಿತ ಹೆಲಿಪ್ಯಾಡ್‌ಗೆ ಮರು ಲ್ಯಾಂಡಿಂಗ್ ಮಾಡಲಾಯಿತು. ಕೆಲವು ಕ್ಷಣಗಳ ಈ ಗೊಂದಲ ಸ್ಥಳದಲ್ಲಿ ನೆರೆದಿದ್ದ ಜನರಲ್ಲಿ ಚರ್ಚೆಗೆ ಗ್ರಾಸವಾಯಿತು.
ನಂತರ ವಿಧಾನಪರಿಷತ್ ಶಾಸಕ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕಿಚ್ಚ ಸುದೀಪ್ ಅವರಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು. ನಗರದ ಪಿಡಬ್ಲ್ಯೂಡಿ ಕಾಲೇಜಿನ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹೂಮಾಲೆ ಹಾಕಿ ಬರಮಾಡಿಕೊಂಡರು.
ಈ ವೇಳೆ ಅಭಿಮಾನಿಗಳು “ಕಿಚ್ಚ ಸುದೀಪ್” ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments