ರಾಯಚೂರು,ಜೂ.೨೧- ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಇವರಿಗೆ ಸಚಿವ ಸ್ಥಾನ ಹಾಗೂ ಕೆ.ಎಚ್.ಮುನಿಯಪ್ಪನವರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡಬೇಕು ಎಂದು ಮಾದಿಗ ಮಹಾಸಭಾ ಅಧ್ಯಕ್ಷ ಪಿ.ಯಲ್ಲಪ್ಪ ಆಗ್ರಹಿಸಿದರು.ಅವರಿಂದು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ ವಸಂತ ಕುಮಾರ ಎನ್ಎಸ್ ಯುಐ ಅಧ್ಯಕ್ಷರಾಗಿ, ೧೧ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ವಿಧಾನಸಭೆ,ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.ವಿಧಾನಪರಿಷತ್ವಸದಸ್ಯರಾಗಿ ೨೨ ಕೋಟಿ ರು ಅನುದಾನ ಮಂಜುರು ಮಾಡಿಸಿ ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ. ಪಕ್ಷ ನಿಷ್ಠಾವಂತರಾಗಿ ಸಂಘಟನೆ ಕೈಗೊಂಡಿದ್ದು ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಲು ಸಚಿವ ಸ್ಥಾನ ನೀಡಬೇಕು ಎಂದರು.ಕರುಣಾಕರ ಕಟ್ಟಮನಿ ಮಾತನಾಡಿ ವಸಂತ ಕುಮಾರ ಮಾದಿಗ ಸಮಾಜದವರಾಗಿದ್ದಾರೆ.ಲಿಂಗಸುಗೂರು ವಿಧನಸಭೆಗೆ ಸ್ಪರ್ದಿಸಿದ್ದಾಗ ಸಹಾಯಕ ಆಯುಕ್ತರು ಜಾತಿ ಪರಿಶೀಲನೆ ಮಾಡಿದ್ದಾರೆ.ಈಗ ಮಾದಿಗರಲ್ಲ ಎನ್ನುವದು ಸರಿಯಲ್ಲ ಎಂದರು. ಸಮಾಜ ಮುಖಂಡರು ಗಳಾದ ನಗರಸಭೆ ಮಾಜಿ ಸದಸ್ಯರು ಗಳಾದ ಚೆನ್ನಪ್ಪ, ಜೆ.ತಿಮ್ಮಪ್ಪ,ಜೆ.ಸತ್ಯನಾಥ,ಜೆ.ಮಾರೆಪ್ಪ,ಅನಿಲಕುಮಾರ ಜನಾರ್ಧನ ಹಳ್ಳಿಬೆಂಚಿ,ಪ್ರಭಾಕರ ಸೇರಿ ಅನೇಕರಿದ್ದರು





Recent Comments