ರಾಯಚೂರು,ಜೂ.೧೯- ಪಕ್ಷ ನಿಷ್ಟೆ, ಸಂಘಟನೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಎನ್.ಬೋಸರಾಜರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾದಿಗ ಸಮಾಜದ ಮುಖಂಡರು ಅಗ್ರಹಿಸಿದ್ದಾರೆ.ಮಾಧ್ಯಮ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಮಹಾನಗರ ಪಾಲಿಕೆ ಹಿರಿಯ ಸದಸ್ಯ ಜಯಣ್ಣ ಕಳೆದ ೫೦ ವರ್ಷಗಳಿಂದ ಪಕ್ಷ ಸಂಘಟನೆಯನ್ನು ಮುಂದುವರೆಸಿರುವ ಎನ್.ಎಸ್.ಬೋಸರಾಜು ಇವರು ಜಿಲ್ಲೆ ಅಭಿವೃದ್ಧಿ ಗೆ ಕೊಡುಗೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ವಿಮಾನ ನಿಲ್ದಾಣ, ಮಹಾನಗರ ಪಾಲಿಕೆ ರಚನೆಯೊಂದಿಗೆ ಕೆರೆಗಳ ಅಭಿವೃದ್ಧಿ ಗೆ ಶ್ರಮಿಸಿದ್ದಾರೆ. ಪಾದರಸದಂತೆ ಕೆಲಸ ಮಾಡುವ ಎನ್.ಎಸ್.ಬೋಸರಾಜ ಇವರು ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಸೇವಾಹಿರಿತನ ,ಪಕ್ಷ ಸಂಘಟನೆ ಗೆ ಸಚಿವಸ್ಥಾನ ನೀಡುವದು ಅಗತ್ಯವಾಗಿದೆ. ಮುಂಬರುವ ವಿಧಾನಸಭೆ,ನಗರ ಹಾಗೂ ಪಂಚಾಯ್ತಿ ಚುನಾವಣೆಗೂ ಸಹಕಾರವಾಗಲಿದೆ. ಪಕ್ಷದ ಹೈಕಮಾಂಡ ನಾಯಕರು ಬೋಸರಾಜ ಇವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕೆಂದರು.ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ ಮಾತನಾಡಿ ಎನ್.ಎಸ್.ಬೋಸರಾಜ ರಿಗೆ ಸಚಿವಸ್ಥಾನ ನೀಡಿದರೆ ಮಾದಿಗ ಸಮುದಾಯಕ್ಕೆ ಅನ್ಯಾಯ ಆಗುವದಿಲ್ಲ. ಅರ್.ಬಿ.ತಿಮ್ಮಾಪುರ ಸೇರಿ ಅನೇಕ ಮೂಲ ಮಾದಿಗ ಶಾಸಕರಿದ್ದು ಸಚಿವ ಸ್ಥಾನ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಹೇಮಲತಾ ಬೂದೆಪ್ಪ, ಎಂ.ಪವನಕುಮಾರ,ನರಸಿಂಹಲು ಮಾಡಗಿರಿ,ಕಿರಿಲಿಂಗಪ್ಪ, ಹನುಮೇಶ ಮುದ್ದಾಪುರ,ಎಚ್.ಬಿ.ಮುರಾರಿ,ಚಂದ್ರಶೇಖರ ಕುರ್ಡಿ,ಅನಿಲಕುಮಾರ ಮಾನವಿ ಸೇರಿದಂತೆ ಅನೇಕರಿದ್ದರು.





Recent Comments