ರಾಯಚೂರು,ಜೂ.೧೬- ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಮತದಾನ ಹಕ್ಕು ಕಸಿಯಲು ಹೊರಟಿರುವ ಕೇಂದ್ರ ಸರಕಾರ, ಚುನಾವಣೆ ಆಯೋಗ ವಿರುದ್ದ ರಾಜ್ಯಾದ್ಯಂತ ಜಾಗೃತಿ ಜಾಥ ನಡೆಯುತ್ತಿದ್ದು ಜೂ.೨೦ ರಂದು ಬೆಂಗಳೂರು ನಲ್ಲಿ ಸಮಾವೇಶ ನಡೆಯಲಿದೆ ಎಂದು ಎಸ್ ಐಆರ್ ವಿರೋಧಿ ಆಂದೋಲನದ ಸಂಚಾಲಕ ವೀರ ಸಂಗಯ್ಯ ಹೇಳಿದರು. ರಾಯಚೂರು ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿ ಪಶ್ಚಿಮ ಬಂಗಾಳದಲ್ಲಿ ಮತದಾರರ ತೆಗೆದು ಹಾಕಿದ ಮಾದರಿಯಲ್ಲಿಯೇ ದಲಿತರು,ಮಹಿಳೆಯರು, ಅನಕ್ಷರಸ್ಥ ರನ್ನು ಪರಿಷ್ಕರಣೆ ಹೆಸರಿನಲ್ಲಿ ತೆಗೆದು ಹಾಕಲಾಗುತ್ತಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ತೆಗೆದು ಹಾಕಲಾಗಿದೆ. ಜನರು ಪ್ರತಿರೋಧ ವ್ಯಕ್ತಪಡಿಸದರೆ ಹೋದರೆ ಬಹುದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಚ್ಚರಿಸಿದರು.ರಾಜ್ಯದ ಕಾಂಗ್ರೆಸ್ ಸರಕಾರ ಮತದಾರರಿಗೆ ಅನ್ಯಾಯವಾಗದಂತೆ ಕ್ರಮವಹಿಸುವ ಬರವಸೆ ನೀಡಬೇಕು.ಇಲ್ಲದೆ ಹೊದರೆ ದೇಶದಾದ್ಯಂತ ಬಹದೊಡ್ಡ ಹೋರಾಟ ಎದುರಿಸಬೇಕಾಗುತ್ತದೆ ಎಂದರು.





Recent Comments