ರಾಯಚೂರು,ಜೂ.೧೭- ನಗರದ ಎರಡು ಪ್ರತ್ಯೇಕ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆಂದ್ರಪ್ರದೇಶದ ಮೂಲ ವ್ಯಕ್ತಿ ಯನ್ನು ಬಂಧಿಸಿರುವ ಪಶ್ಚಿಮ ಠಾಣೆ ಪೊಲೀಸರು ೭ ಲಕ್ಷ ೨೦ ಸಾವಿರ ಮೌಲ್ಯ ದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ನಗರದ ಪ್ರಶಾಂತ ನಗರದ ನಿವಾಸಿ ಕೆಎಸ್ ಆರ್ ಟಿಸಿ ಕ್ಯಾಶಿಯರ ವಿರೇಶ ಎಂಬುವರ ಮನೆ ಕಳ್ಳತನ ಮಾಡಿ ೪ ಲಕ್ಷ ೫೦ ಸಾವಿರ ಮೌಲ್ಯದ ನಕ್ಲೆಸ್ ಕಳ್ಳತನ ವಾಗಿತ್ತು.ಪ್ರಕರಣ ಬೇದಿಸಲು ಪೊಲೀಸರು ನಾಲ್ಕು ತಂಡ ರಚಿಸಿದ್ದರು. ತನಿಖಾ ತಂಡ ಆದೋನಿ ದಮ್ಮರಿ ಕಾಲೋನಿ ನಿವಾಸಿ ಗೋವಿಂದ ರಾಜು ದಮ್ಮರಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇದೇ ಆರೋಪಿ ನೇತಾಜಿನಗರ ಠಾಣಾ ವ್ಯಾಪ್ತಿ ಮನೆಯಲ್ಲಿ ೧೫ ಗ್ರಾಂ ಚಿನ್ನದ ಆಭರಣ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯಿಂದ ೭ ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ತನಿಖಾ ತಂಡ ಕಾರ್ಯವನ್ನು ಎಸ್ಪಿ ಅರುಣ್ಷಾಂಗಿರಿ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ ಪ್ರಶಂಸಿದ್ದಾರೆ.





Recent Comments