ರಾಯಚೂರು: ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮತ್ತು ವಸತಿ ರಹಿತರಿಗೆ ವಸತಿ ನೀಡಲು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನ ವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆಗೆ ಪರಿಹಾರವಾಗಿ ಒನ್ ಟೈಮ್ ಸೆಟಲ್ ಮೆಂಟ್ ಜಾರಿ ಮಾಡುವ ಮೂಲಕ ಭೂಮಿ ಹಕ್ಕು ಮಾನ್ಯ ಮಾಡಬೇಕು. ವಿಲೇವಾರಿ ಹೆಸರಿನಲ್ಲಿ ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ದ ಹಕ್ಕು ಸಿಗಬೇಕು. ಭೂಕಂದಾಯ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಬಡ ಜನರಿಗೆ ಭೂಮಿ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು.
ವಸತಿ ಹೀನರಿಗೆ ರಾಜ್ಯ ವ್ಯಾಪಿ ಸಮಗ್ರ ಮೆಗಾ ವಸತಿ ಯೋಜನೆ ಘೋಷಣೆ ಮಾಡಬೇಕು, ಅರ್ಜಿ ಸಲ್ಲಿಸಿ-ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಮಾನದಂಡದ ಮೇಲೆ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು.
ಸಾಗುವಳಿ ಚೀಟಿ ಹೊಂದಿರುವವರೆಲ್ಲರಿಗೂ ಕೂಡಲೇ ಪಹಾಣಿ ಒದಗಿಸಬೇಕು. ಅರ್ಜಿ ಸಲ್ಲಿಸಿರುವ ಯಾರನ್ನು ಯಾವ ಭೂಮಿ ಯಿಂದಲೂ ಒಕ್ಕಲೇಳಿಸಬಾರದು ಎಂದು ಮನವಿ ಮಾಡಿದರು.
ರಾಯಚೂರು ಜಿಲ್ಲೆಯ ಭೂಮಿ ವಸತಿ ಸಮಸ್ಯೆಗಳ ಹೋರಾಟಗಾರರನ್ನೂ ಒಳಗೊಂಡು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬAಧಪಟ್ಟ ಅಧಿಕಾರಗಳೊಂದಿಗೆ ತುರ್ತಾಗಿ ಸಭೆ ನಡೆಸಬೇಕು ಮತ್ತು ಸಭೆಯ ತೀರ್ಮಾನಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಕುರುಬದೊಡ್ಡಿ, ಆತ್ಕೂರು, ಜೇಗರಕಲ್, ಬಾಯಿದೊಡ್ಡಿ, ಬಾಪೂರು, ವಡವಟಿ ಈ ಗ್ರಾಮಗಳಲ್ಲಿರುವ ಭೂಮಿ ಮತ್ತು ವಸತಿ ಸಂಬOಧಿಸಿದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಂಜನೇಯ ಕುರುಬದೊಡ್ಡಿ, ಲಕ್ಷ್ಮಣ ಮಂಡಲಗೇರಾ, ಗೋವಿಂದ ದಾಸ್, ಬಂಗಾರಿ ನರಸಿಂಹಲು, ಹುಲಿಗೆಪ್ಪ ಕೆಆರ್‌ಎಸ್, ಗುರುರಾಜ ಗ್ರೂಕೂಸೌ, ಸೇರಿದಂತೆ ಅನೇಕರು ಇದ್ದರು.
ಭೂಮಿ ಮತ್ತು ವಸತಿ ರಹಿತರಿಗೆ ವಸತಿ ನೀಡಲು ಸರ್ಕಾರ ಸುಳ್ಳು ಭರವಸೆ ಖಂಡಿಸಿ ಪ್ರತಿಭಟನೆ
RELATED ARTICLES




Recent Comments