Wednesday, April 15, 2026
Google search engine
HomeBlogಸಿನಿಮೀಯ ಶೈಲಿಯಲ್ಲಿ ಲೋಕಾಯುಕ್ತ ದಾಳಿ: ಲಂಚದ ಹಣದೊಂದಿಗೆ ಪರಾರಿಯಾಗಿದ್ದ ಚೀಫ್ ಆಫೀಸರ್ ಬಂಧನ

ಸಿನಿಮೀಯ ಶೈಲಿಯಲ್ಲಿ ಲೋಕಾಯುಕ್ತ ದಾಳಿ: ಲಂಚದ ಹಣದೊಂದಿಗೆ ಪರಾರಿಯಾಗಿದ್ದ ಚೀಫ್ ಆಫೀಸರ್ ಬಂಧನ

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಲೋಕಾಯುಕ್ತರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ, ಲಂಚದ ಹಣದೊಂದಿಗೆ ಪರಾರಿಯಾಗಿದ್ದ ಪಟ್ಟಣ ಪಂಚಾಯತ್ ಚೀಫ್ ಆಫೀಸರ್ ಸುರೇಶ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.

ಸಿರವಾರ ಪಟ್ಟಣದ ಹೊಸ ಲೇಔಟ್‌ನ 34 ನಿವೇಶನಗಳ ಖಾತಾ ಮುಟೇಶನ್ ಮಾಡಲು ಚೀಫ್ ಆಫೀಸರ್ ಸುರೇಶ್ ಶೆಟ್ಟಿ ಅವರು ಲೇಔಟ್ ಮಾಲೀಕ ರಘರಾಮ್ ರೆಡ್ಡಿ ಬಳಿಯಿಂದ ₹2 ಲಕ್ಷ ಲಂಚ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಲೇಔಟ್ ಮಾಲೀಕ ರಘರಾಮ್ ರೆಡ್ಡಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ಆಧಾರವಾಗಿ ಲೋಕಾಯುಕ್ತ ತಂಡವು ಕಾರ್ಯಾಚರಣೆ ರೂಪಿಸಿ, ನಿನ್ನೆ ದೂರುದಾರರಿಂದ ₹1 ಲಕ್ಷ ಹಣವನ್ನು ಚೀಫ್ ಆಫೀಸರ್‌ಗೆ ನೀಡುವ ವೇಳೆ ದಾಳಿ ನಡೆಸಿತು.

ಇದನ್ನೂ ಓದಿ:ಅಸ್ಸಾಂ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಶಾಕ್: ಅಭ್ಯರ್ಥಿ ಸುರೇನ್ ಡೈಮರಿ ಪಕ್ಷತ್ಯಾಗ ಘೋಷಣೆ

ದಾಳಿ ವೇಳೆ ಪರಿಸ್ಥಿತಿಯನ್ನು ಅರಿತ ಸುರೇಶ್ ಶೆಟ್ಟಿ, ಹಣದ ಸಮೇತ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು. ಸಿರವಾರದಿಂದ ಕವಿತಾಳ ಪಟ್ಟಣದತ್ತ ಕಾರಿನಲ್ಲಿ ತೆರಳಿ, ಸ್ನೇಹಿತರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.

ಇದಾದ ಬಳಿಕ ಲೋಕಾಯುಕ್ತ ಅಧಿಕಾರಿಗಳು ಮೊಬೈಲ್ ಲೋಕೇಶನ್ ಟ್ರೇಸ್ ಮಾಡಿ, ಕವಿತಾಳದಲ್ಲಿ ಅಡಗಿ ಕುಳಿತಿದ್ದ ಸುರೇಶ್ ಶೆಟ್ಟಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದ್ದು, ಆರೋಪಿಯಿಂದ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments