ರಾಯಚೂರು: ನಗರ ಸಾರ್ವಜನಿಕರಿಗೆ 2026-27ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಮಹಾನಗರ ಪಾಲಿಕೆ ಸುವರ್ಣ ಅವಕಾಶ ನೀಡಿದ್ದು, ಏಪ್ರಿಲ್ 1ರಿಂದ 30ರವರೆಗೆ ತೆರಿಗೆ ಮೊತ್ತಕ್ಕೆ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಏಪ್ರಿಲ್ ತಿಂಗಳೊಳಗೆ ತೆರಿಗೆ ಪಾವತಿಸಿದರೆ ರಿಯಾಯಿತಿ ಲಭ್ಯವಿದ್ದು, ಮೇ ಮತ್ತು ಜೂನ್ ತಿಂಗಳಲ್ಲಿ ಯಾವುದೇ ರೀತಿಯ ರಿಯಾಯಿತಿ ಇರುವುದಿಲ್ಲ. ಜುಲೈ 2026ರಿಂದ ಬಾಕಿ ಉಳಿದ ಆಸ್ತಿ ತೆರಿಗೆ ಮೊತ್ತಕ್ಕೆ ಶೇಕಡ 2ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ನಗರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಾಗರಿಕರು ತಮ್ಮ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ನಿಗದಿತ ಅವಧಿಯೊಳಗೆ ಪಾವತಿಸುವಂತೆ ಮನವಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ, ಮಹಾನಗರ ಪಾಲಿಕೆಯ ವಲಯ ಕಚೇರಿ-1ರಲ್ಲಿ ಎರಡು ಕೌಂಟರ್‌ಗಳು ಹಾಗೂ ವಲಯ ಕಚೇರಿ-2ರಲ್ಲಿ ಒಂದು ಕೌಂಟರ್ ತೆರೆಯಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಂಡು ತೆರಿಗೆ ಪಾವತಿಸಲು ಸೂಚಿಸಲಾಗಿದೆ.




Recent Comments