ಮಂತ್ರಾಲಯ: ಆಗಸ್ಟ್ ಹಾಗೂ ಸೆಪ್ಟೆಂಬರ್ 2026ರ ಅವಧಿಯ ಒಟ್ಟು 16 ದಿನಗಳ ಹುಂಡಿ ಎಣಿಕೆ ಕಾರ್ಯವು ಸೆಪ್ಟೆಂಬರ್ 9ರಂದು ಪೂರ್ಣಗೊಂಡಿದೆ.ಹುಂಡಿ ಎಣಿಕೆಯಲ್ಲಿ ನಗದು ರೂಪದಲ್ಲಿ ₹3,20,66,639 ಸಂಗ್ರಹವಾಗಿದ್ದು, ನಾಣ್ಯಗಳ ರೂಪದಲ್ಲಿ ₹10,02,500 ದೊರೆತಿದೆ. ಈ ಮೂಲಕ ಒಟ್ಟು ₹3,30,69,139 ಮೊತ್ತ ಸಂಗ್ರಹವಾಗಿದೆ.ಇದಲ್ಲದೆ, ಭಕ್ತರು ಹುಂಡಿಗೆ ಅರ್ಪಿಸಿದ 47 ಗ್ರಾಂ ಚಿನ್ನ ಹಾಗೂ 632 ಗ್ರಾಂ ಬೆಳ್ಳಿ ಕೂಡ ಪತ್ತೆಯಾಗಿದೆ.ಹುಂಡಿ ಎಣಿಕೆ ಕಾರ್ಯವನ್ನು ನಿಗದಿತ ನಿಯಮಾನುಸಾರ ಪೂರ್ಣಗೊಳಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ.ಸಂಗ್ರಹ ವಿವರ:ನಗದು: 3,20,66,639 ರೂನಾಣ್ಯಗಳು: 10,02,500 ರೂಒಟ್ಟು: 3,30,69,139ಚಿನ್ನ: 47 ಗ್ರಾಂಬೆಳ್ಳಿ: 632 ಗ್ರಾಂಎಣಿಕೆ ಅವಧಿ: 16 ದಿನಗಳು






Recent Comments