ರಾಯಚೂರು, ಆ.೨೯- ಜಿಲ್ಲೆಯ ಸಿಂಧನೂರು ನಗರದ ಡಾ. ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ೩೦ ಜನ ವಿದ್ಯಾರ್ಥಿ ಗಳು ಉಪಹಾರ ಸೇವಿಸಿ ಅಸ್ವಸ್ಥಗೊಂಡ ಘಟನೆ ಜರುಗಿದೆ.ಬೆಳಗಿನ ಉಪಹಾರ ಚಿತ್ರನ್ನ ಸೇವಿಸಿದ ವಿದ್ಯಾರ್ಥಿಗಳು ಗಳು ಹೊಟ್ಟೆನೋವು ಕಂಡಿದ್ದರಿಂದ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ . ಅಸ್ವಸ್ಥತೆ ಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಒಂದೇ ತಿಂಗಳಲ್ಲಿ ಮೂರನೆ ಘಟನೆ ಜರುಗಿದೆ. ವಸತಿ ನಿಲಯಗಳ ಆಹಾರ ವಿತರಣೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಿದ್ದರು ಅನುಸರಿಸದೇ ಇರುವದು ಅವಾಂತರಕ್ಕೆ ಕಾರಣವಾಗುವಂತಾಗಿದೆ.






Recent Comments