ರಾಯಚೂರು: ಇತ್ತೀಚೆಗೆ ಕೆಲ ಪತ್ರಕರ್ತರು ಬದ್ಧತೆ, ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವುದು ಚಿಂತಾಜನಕವಾಗಿದೆ.ಪತ್ರಕರ್ತರು ವಿಶ್ವಾರ್ಹತೆ ಉಳಿಸಿಕೊಳ್ಳುವ ಸವಾಲು ಎದುರಾಗಿದೆ ಎಂದು ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಳವಳ ವ್ಯಕ್ತಪಡಿಸಿ ದರು.ರಾಯಚೂರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ರಾಯಚೂರು ರಿಪೋರ್ಟರ್ಸ್ ಗಿಲ್ಡ್, ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು. ವೃತ್ತಿ ಗೌರವ ಹೆಚ್ಚಿಸುವ ಕೆಲಸ ಮಾಡಬೇಕಿದೆ.ಸುಳ್ಳು ಹೇಳುವ ಕ್ರಿಮಿನಲ್ ಪತ್ರಕರ್ತರು, ಆರ್ ಟಿಐ ಪತ್ರಕರ್ತರು ಸುದ್ದಿಮನೆಗೆ ಅಗತ್ಯವಿಲ್ಲ. ನೋವಿಗೆ ಸ್ಪಂದಿಸುವ, ಹೃದಯಕ್ಕೆ ಹತ್ತಿರವಾಗುವಂತೆ ಕೆಲಸ ಮಾಡುವವರೇ ನಿಜವಾದಪತ್ರಕರ್ತರು ಎಂದರು ವ್ಯವಸ್ಥೆಯಲ್ಲಿನ ಲೋಪವನ್ನು ಕನ್ನಡಿ ಹಿಡಿಯುವಂತೆ ಕೆಲಸ ಮಾಡಬೇಕಿದೆ. ಬರೀ ಹೇಳಿಕೆಗಳನ್ನು ಕೇಳುವುದು ಪತ್ರಕರ್ತರ ಕೆಲಸವಲ್ಲ. ಘಟನಾ ಸ್ಥಳಗಳಿಗೆ ಹೋಗಿ ಪರಿಶೀಲನೆ ಮಾಡಿ ಆಡಳಿತಕ್ಕೆ ಬಿಸಿ ಮುಟ್ಟಿಸುವುದೇ ಪತ್ರಕರ್ತರ ಮುಖ್ಯ ಕೆಲಸವಾಗಬೇಕು ಎಂದರು. ಸಮಾಜಕ್ಕೆ ಕೊಡುಗೆ ಕೊಡಬೇಕು. ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಕೆಲಸ ಪತ್ರಕರ್ತರು ಮಾಡಬೇಕು. ಯಾವುದೋ ಒಂದು ಹಳ್ಳಿಗೆ ರಸ್ತೆ ನಿರ್ಮಿಸಿದರೆ ಅಲ್ಲಿ ಪತ್ರಕರ್ತನ ಪಾತ್ರ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಚಟುವಟಿಕೆಯಿಂದ ಕೆಲಸ ಮಾಡಬೇಕು ಎಂದರು.





Recent Comments