ಹಳೆಮಲಿಯಾಬಾದ ಗ್ರಾಮದಲ್ಲಿ ಮನೆಯೊಳಗೆ ಆಟವಾಡುತ್ತಿದ್ದ ಮಗುವನ್ನು ಕಚ್ಚಿದ ಬೀದಿನಾಯಿ:ಜನರಲ್ಲಿ ಭೀತಿರಾಯಚೂರು,ಜು.೨೦- ತಾಲೂಕಿನ ಹಳೆ ಮಲಿಯಾಬಾದ ಗ್ರಾಮದ ಮನೆಯಲ್ಲಿ ನಾಲ್ಕುವರ್ಷದ ಬಾಲಕನಮೇಲೆ ಬೀದಿ ನಾಯೊ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಜರುಗಿದೆ. ಬಜಾರಪ್ಪ ಎಂಬುವವರ ನಾಲ್ಕು ವರ್ಷದ ಮಗು ಗೋಪಾಲ ಮನೆಯೊಳಗೆ ಆಟವಾಡುತ್ತಿದ್ದಾಗ ಬೀದಿನಾಯಿ ಧಾಳಿಮಾಡಿ ತಲೆಗೆ ಗಂಬೀರವಾಗಿ ಕಚ್ಚಿ ಗಾಯಗೊಳಿಸಿದೆ. ಮಗುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತಿಚಿಗಷ್ಟೆ ಸಿಂಧನೂರುನಲ್ಲಿ ಜೋಳಗಿಮಲಗಿದ್ದ ಮಗುವನ್ನ ಬೀದಿಗಾಯಗಳು ಕಚ್ಚಿದ್ದವು. ಈಗ ಮಲಿಯಾಬಾದ ಗ್ರಾಮದಲ್ಲಿ ಘಟನೆ ಜರುಗಿದೆ. ಬೀದಿನಾಯಿಗಳ ನಿಯಂತ್ರಣ ಕ್ಕೆ ಮುಂದಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.





Recent Comments