Tuesday, July 28, 2026
Google search engine
Homeದೇಶಕೇಂದ್ರ ಬಜೆಟ್ ಅಧಿವೇಶನ: ಹಾಜರಾತಿಯಲ್ಲಿ ಜಿ.ಕುಮಾರನಾಯಕರಿಗೆ ಹನ್ನೊಂದನೇ ಸ್ಥಾನ

ಕೇಂದ್ರ ಬಜೆಟ್ ಅಧಿವೇಶನ: ಹಾಜರಾತಿಯಲ್ಲಿ ಜಿ.ಕುಮಾರನಾಯಕರಿಗೆ ಹನ್ನೊಂದನೇ ಸ್ಥಾನ

ರಾಯಚೂರು,ಜು.೧೮-ಸಂಸತ್ ಅಧಿವೇಶನದಲ್ಲಿ ಹಾಜರಾದ ಸಂಸದರಲ್ಲಿ ರಾಯಚೂರು ಯಾದಗಿರಿ ಸಂಸದ ಜಿ.ಕುಮಾರನಾಯಕ ರಾಜ್ಯದ ಸಂಸದರಲ್ಲಿ ೧೧ ನೇ ಸ್ಥಾನದಲ್ಲಿದ್ದಾರೆ.ರಾಜ್ಯದ ಸಂಸದರಲ್ಲಿ ಅತಿಹೆಚ್ಚು ಸಮಯ ನೂರಕ್ಕೆ ನೂರರಷ್ಟು ಹಾಜರಾತಿ ದಾಖಲಿಸಿದ್ದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ ಚೌಟ.ಎರಡನೇ ಸ್ಥಾನ ದ ಹಾಜರಾತಿ ಅಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮೂರನೆ ಸ್ಥಾನ ದಲ್ಲಿ ಡಾ.ಮಂಜುನಾಥ ಹಾಜರಾಗಿದ್ದಾರೆ.ಅಧಿವೇಶನಕ್ಕೆ ಹಾಜರಾಗಿರುವನ್ನು ಕಾಮನ್ ವೆಲ್ತ್ ಹ್ಯೂಮನ್ ರೈಟ್ ಇನ್ಸಿಯೇಟಿವ್ ಎಂಬ ಸಂಸ್ಥೆ ನಡೆಸಿದ ಅಧ್ಯಯನ ದಲ್ಲಿ ದಾಖಲಿಸಲಾಗಿದೆ.ರಾಜ್ಯ ದಿಂದ ಲೋಕಸಭಾ ಸದಸ್ಯರಾಗಿರುವ ಸದಸ್ಯರಲ್ಲಿ ಒಬ್ಬರು ಮಾತ್ರ ನೂರಕ್ಕೆ ನೂರಷ್ಟು ಹಾಜರ ಅಗಿದ್ದಾರೆ. ಕಲ್ಬುರ್ಗಿಸಂಸದ ಕೊನೆ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಬೀದರ ಸಂಸದ ಶೇ ೭೪ ರಷ್ಟು ಹಾಜರಾದರೆ, ಬಳ್ಳಾರಿ ಮತ್ತು ಕೊಪ್ಪಳದ ಇಬ್ಬರು ಸಂಸದರು ಶೇ.೫೮.೦೬ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments