ರಾಯಚೂರು,ಜು.೮- ಜಿಲ್ಲೆಯ ದೇವದುರ್ಗ ತಾಲೂಕಿನ ಹೊನ್ನಕುಣಿ ಕೆಬಿಜೆಎನ್ಎಲ್ ಎಇಇ ಬಸನಗೌಡ ಎಂಬುವವರ ರಾಯಚೂರು ನಿವಾಸ ಸೇರಿ ಏಳು ಕಡೆ ಒಂದೇ ಬಾರಿಗೆ ಲೋಕಾಯುಕ್ತ ಧಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ಲೋಕಾಯುಕ್ತರ ದಾಳಿ ನಡೆಸಿರುವ ಅಧಿಕಾರಿಗಳು ಎಚ್ ಅರ್ ಬಿ ಲೇ ಓಔಟ್ ,ಕಚೇರಿ, ಯಕ್ಲಾಸಪುರ ಅಣ್ಣನ ಮನೆ ಸೇರಿ ಪೆಟ್ರೋಲ್ ಬಂಕ್ ,ಮ್ಯಾಜಿಕ್ ರೆಸ್ಟೋರೆಂಟ್ ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಅದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಅಧರಿಸಿ ಲೊಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದ ಪರಿಶೀಲನೆ ಯಲ್ಲಿ ತೊಡಗಿದೆ.ಪತ್ನಿ ಹೆಸರಿನಲ್ಲಿ ಪೆಟ್ರೋಲ ಬಂಕ್ ,ತೋಟ,ರೆಸ್ಟೋರೆಂಟ್ ಹೊಂದಿದ್ದು ಪರಿಶೀಲನೆ ನಡೆಯುತ್ತಿದೆ.





Recent Comments