Wednesday, July 29, 2026
Google search engine
Homeರಾಜಕೀಯಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಸಿಎಂ ದೆಹಲಿಗೆ: ಜಿಲ್ಲೆಯ ಯಾರಿಗೆ ಮಣೆ?

ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ಸಿಎಂ ದೆಹಲಿಗೆ: ಜಿಲ್ಲೆಯ ಯಾರಿಗೆ ಮಣೆ?

ರಾಯಚೂರು,ಜು.೨- ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಕಸರತ್ತು ಮುಂದುವರೆದಿದ್ದು ಇಂದು ಸಿಎಂ ಡಿ.ಕೆ.ಶಿವುಕುಮಾರ ದೆಹಲಿಗೆ ತೆರಳಿ ಹೈಕಮಾಂಡ ಅನುಮತಿ ಸಿದ್ದವಾಗಿದ್ದಾರೆ. ಆದರೆ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಸಿಎಂ ಪಟ್ಟಿಯಲ್ಲಿ ಜಿಲ್ಲೆಗೆ ಸ್ಥಾನ ದೊರೆಯಲಿದೆ ಎಂಬ ಭರವಸೆಯಲ್ಲಿ ಕಾರ್ಯಕರ್ತರು ನಿರೀಕ್ಷೆ ಯಲ್ಲಿ ಉಳಿದಿದ್ದಾರೆ.ಜಿಲ್ಲೆಯ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸಿದ್ದಾರೆ. ಮಾಜಿ ಸಚಿವ ಎನ್.ಎಸ್.ಬೋಸರಾಜ ಹಾಗೂ ಶಾಸಕ ಹಂಪನಗೌಡ ಬಾದರ್ಲಿ ಬಣ ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಟಿ ಮಾಡಿದೆ‌. ಮಾಜಿ ಸಚಿವ ಎನ್.ಎಸ್.ಬೋಸರಾಜ ಬಣದಲ್ಲಿ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಬಸನಗೌಡ ಬಾದರ್ಲಿ, ಹಂಪಯ್ಯ ನಾಯಕ, ಸಂಸದ ಜಿ.ಕುಮಾರ ನಾಯಕ, ಮುಖಂಡರಾದ ರವಿ ಬೋಸರಾಜ್, ಮಹ್ಮದ ಶಾಲಂ,ಕೆ.ಶಾಂತಪ್ಪ ಇತರರು ಗುರುತಿಸಿಕೊಂಡಿದ್ದು, ತಮ್ಮ ಬಣದ ಒಬ್ಬರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ಶಾಸಕ ಹಂಪನಗೌಡ ಬಾದರ್ಲಿ ಬಣದಿಂದ ಶಾಸಕರಾದ ಬಸನಗೌಡ ದದ್ದಲ್, ಎ.ವಸಂತಕುಮಾರ ಹಾಗೂ ಶರಣೇಗೌಡ ಬಯ್ಯಾಪುರ ಅವರು ಸಹ ತಮ್ಮ ಗುಂಪಿನ ಹಿರಿಯ ಶಾಸಕರೊಬ್ಬರಿಗೆ ಅವಕಾಶ ನೀಡುವಂತೆ ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಎರಡು ಬಣಗಳ ಅಹವಾಲು ಸ್ವೀಕರಿಸಿದ ಹೈಕಮಾಂಡ್ ಕಾದು ನೋಡುವ ತಂತ್ರ ಮುಂದುವರೆಸಿದೆ. ಸೇವಾಹಿರಿತನ, ಜಾತಿ ಲೆಕ್ಕಚಾರಜಿಲ್ಲೆಯ ಪೈಕಿ ಹಿರಿತನಕ್ಕೆ ಮಣೆ ಹಾಕಿ ಸಚಿವ ಸ್ಥಾನ ನೀಡಿದರೆ, ಹಂಪನಗೌಡ ಬಾದರ್ಲಿ ಹಾಗೂ ಎನ್.ಎಸ್.ಬೋಸರಾಜ್ ಅವರ ಹೆಸರು ಮುನ್ನಲೆಗೆ ಬಂದಿದ್ದು, ಜಾತಿ ಲೆಕ್ಕಾಚಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ಅವಕಾಶ ನೀಡಿದರೆ ಆರ್. ಬಸನಗೌಡ ತುರ್ವಿಹಾಳ ಹಾಗೂ ಬಸನಗೌಡ ದದ್ದಲ್ ನಡುವೆ ಪೈಪೋಟಿ ಏರ್ಪಟಿದೆ. ಈ ನಡುವೆ ವಿಧಾನಪರಿಷತ್ ಶಾಸಕರಾದ ಬಸನಗೌಡ ಬಾದರ್ಲಿ ಹಾಗೂ ಎ.ವಸಂತಕುಮಾರ ಅವರು ಸಹ ಕೇಳಿಬರುತ್ತಿದ್ದು, ಯಾರಿಗೆ ಅವಕಾಶ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು ಗುಂಪುಗಾರಿಕೆ ಮತ್ತಷ್ಟು ತೀವ್ರಗೊಂಡಿದೆ. ಯಾರು ಮೆಲುಗೈ ಸಾಧಿಸುತ್ತಾರೆ ಎಂಬುದು ಪ್ರಶ್ನೆ ಯಾಗಿ ಉಳಿದಿದೆ.

RELATED ARTICLES
- Advertisment -
Google search engine

Most Popular

Recent Comments