ರಾಯಚೂರು,ಜೂ.೨೮- ದೇವದುರ್ಗ ಪಟ್ಟಣದಲ್ಲಿ ಬಸ್ ಸ್ಟ್ಯಾಂಡ್ ಎದುರುಗಡೆ ರಸ್ತೆಯಲ್ಲಿರುವ ಇರುವ ಖಾಜಾ ಬಿಲ್ಡಿಂಗಿನ ಒಂದು ಭಾಗ ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು ಇರುತ್ತದೆ ಹಾಗೂ ಒಬ್ಬನಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಸದರಿ ಬಿಲ್ಡಿಂಗ್ 2001 ನೇ ಇಸ್ವಿಯಲ್ಲಿ ಕಟಲ್ಪಟ್ಟಿದ್ದು ಅದರ ಮಾಲೀಕ ಸಾದತ್ ಅಲಿ ಎಂಬುವರಾಗಿರುತ್ತಾರೆ. ಚಲನಚಿತ್ರದ ಪೊಸ್ಟರ ಅಂಟಿಸಲು ಹೋದಾಗ ದುರ್ಘಟನೆ ಜರುಗಿದೆ.ಮೃತಪಟ್ಟವರನ್ನು ವಿದ್ಯಾರ್ಥಿಗಳಾದ ನಾಗರಾಜ ಕ್ಯಾದಿಗೆರ ಮತ್ತುರವಿಕುಮಾರ್ ಸಮುದ್ರ ಎಂದು ಗುರುತಿಸಲಾಗಿದೆ.ಮತ್ತೋರ್ವ ಗಂಬೀರ ಗಾಯಗೊಂಡಿದ್ದು ರಾಯಚೂರು ರಿಮ್ಸ್ ಆಸ್ಪತ್ರೆ ದಾಖಲಿಸಲಾಗಿದೆ. ದೇವದುರ್ಗ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದ್ದಾರೆ.





Recent Comments