ರಾಯಚೂರು,ಜೂ.೨೪- ವಿದ್ಯುತ್ ಬಿಲ್ ಕಟ್ಟದೆ ಇರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಕೋಪೋದ್ರಿಕ್ತನಾದ ವ್ಯಕ್ತಿಯೊಬ್ಬ ಜೆಸ್ಕಾಂ ಶಾಖಾ ಕಚೇರಿ ಗೆ ಬೆಂಕಿ ಹಚ್ಚಿದ ಘಟನೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ನಡೆದಿದೆ. ಗ್ರಾಮ ನಿವಾಸಿ ಶಿವಪ್ಪ ಎಂಬಾತ ೧೨ ಸಾವಿರ ರೂ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದ. ಜೆಸ್ಕಾಂ ಲೈನ್ ಮ್ಯಾನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಕೋಪಗೊಂಡ ಶಿವಪ್ಪ ಶಾಖಾ ಕಚೇರಿಗೆ ಬೆಂಕಿ ಹಚ್ಚಿದ್ದಾನೆ. ಪೀಠೋಪಕರಣ ,ದಾಖಲೆ ಸುಟ್ಟ ಹೋಗಿವೆ. ಸಿರವಾರ ಪೊಲೀಸರು ಸ್ಥಳಕ್ಕೆ ತೆರಳಿ ಅರೋಪಿ ಶಿವಪ್ಪನನ್ನು ಬಂಧಿಸಿದ್ದಾರೆಮ ತನಿಖೆ ಮುಂದುವರೆದಿದೆ.





Recent Comments